ಹೊಸದಿಲ್ಲಿ: ಫಿಝಿಯಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಚಾಂಪಿಯನ್ಶಿಪ್ ವೇಟ್ಲಿಫ್ಟಿಂಗ್ ಕೂಟದಲ್ಲಿ ಭಾರತದ ಅಲ್ಲುರಿ ಅಜಯ್ ಬಾಬು ಪುರುಷರ 81 ಕೆ.ಜಿ. ವಿಭಾಗದಲ್ಲಿ ಬಂಗಾರ ಗೆದ್ದಿದ್ದಾರೆ. ಒಟ್ಟಾರೆ 326 ಕೆ.ಜಿ. (147+179 ಕೆ.ಜಿ.) ಭಾರ ಎತ್ತುವ ಮೂಲಕ ಅವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
19 ವರ್ಷದ ಅಲ್ಲುರಿ ಅಜಯ್ 81 ಕೆ.ಜಿ. ಕಿರಿಯರ ವಿಭಾಗದಲ್ಲಿ ಚಿನ್ನ ಗೆಲ್ಲುವ ಜತೆ ಕ್ಲೀನ್ ಆಯಂಡ್ ಜರ್ಕ್ನಲ್ಲಿ ಒಟ್ಟು 179 ಕೆ.ಜಿ. ಭಾರ ಎತ್ತಿ ಕಾಮನ್ವೆಲ್ತ್ ದಾಖಲೆ ಕೂಡ ನಿರ್ಮಿಸಿ ಗಮನ ಸೆಳೆದರು.