ಡೆವೋನ್ ಕಾನ್ವೆ, ಕೇನ್ ವಿಲಿಯಂಸನ್ ಮೊದಲಾದ ಸ್ಟಾರ್ ಆಟಗಾರರ ವಿಫಲಗೊಂಡರೂ ಎದೆಗುಂದದೆ ಆಡಿದ ವಿಲ್ ಯಂಗ್ ಪಾಕಿಸ್ತಾನದ ವಿರುದ್ದ ಶತಕ ಬಾರಿಸುವ ಮೂಲಕ ತಂಡದ ನ್ಯೂಜಿಲೆಂಡ್ ನ ಇನ್ನಿಂಗ್ಸ್ ಗೆ ಜೀವ ತುಂಬಿದ್ದಾರೆ. ಇದು ಈ ಬಾರಿಯ ಐಸಿಸಿ ಟೂರ್ನಿಯ ಪ್ರಥಮ ಶತಕವಾಗಿದೆ.
ಯಂಗ್- ಲಾಥಮ್ ಜೊತೆಯಾಟ: 4ನೇ ಕ್ರಮಾಂಕದಲ್ಲಿ ಕ್ರೀಸಿಗೆ ಆಗಮಿಸಿದ ಡೆರಿಲ್ ಮಿಚೆಲ್ ಅವರು ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಲೆಯೂರಲಿಲ್ಲ. 10 ರನ್ ಗಳಿಸಿದ್ದ ಅವರಿಗೆ ಹ್ಯಾರಿಸ್ ರೌಫ್ ಅವರು ಪೆವಿಲಿಯನ್ ದಾರಿ ತೋರಿದರು. ಆ ಬಳಿಕ ಒಂದಾದ ಆರಂಭಿಕ ವಿಲ್ ಯಂಗ್ ಮತ್ತು 5ನೇ ಕ್ರಮಾಂಕದ ಬ್ಯಾಟರ್ ಟಾಮ್ ಲಾಥಮ್ 4ನೇ ವಿಕೆಟ್ ಗೆ ಮಹತ್ವದ 151 ರನ್ ಗಳ ಜೊತೆಯಾ ಟವಾಡಿದರು.