ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೊಸ್ತಿಲಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.ಟೂರ್ನಿ ಪ್ರಾರಂಭವಾಗಲು ಇನ್ನೇನು ವಾರ ಉಳಿದಿರುವಾಗ ತಂಡದ ನಂಬರ್ ಒನ್ ವೇಗಿ ಮಿಚೆಲ್ ಸ್ಟಾರ್ಕ್ ಟೂರ್ನಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ಅವರು ಟೂರ್ನಿಯಿಂದ ದೂರ ಉಳಿಯಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಆ ವೈಯಕ್ತಿಕ ಕಾರಣ ಮಾತ್ರ ಏನು ಎಂದು ಮಾತ್ರ ತಿಳಿದು ಬಂದಿಲ್ಲ. ಮಹತ್ವದ ಟೂರ್ನಿಯೊಂದರ ವೇಳೆ ಒಬ್ಬನೋ ಇಬ್ಬರೋ ಪ್ರಮುಖ ಆಟಗಾರರು ಲಭ್ಯರಿಲ್ಲದಿದ್ದರೆ ಹೇಗೋ ಸಂಭಾಳಿಸಬಹುದು. ಆದರೆ ಇದೀಗ ಹೊರಬಿದ್ದಿವುದು ಒಬ್ಬರಲ್ಲ, ಬರೋಬ್ಬರಿ ಐದು ಮಂದಿ!