ಭಾರತ ತಂಡ ಈಗಾಗಲೇ ದುಬೈಗೆ ತಲುಪಿ ತಾಲೀಮು ನಡೆಸಲು ಪ್ರಾರಂಭಿಸಿದೆ. ಭಾನುವಾರ ನೆಟ್ಸ್ ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದ ರಿಷಬ್ ಪಂತ್ ಅವರ ಮೊಣಕಾಲಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.
ಹೀಗಾಗಿ ಇದೀಗ ಚಾಂಪಿಯನ್ಸ್ ಟ್ರೋಫಿ ಆಡಲು ಸನ್ನದ್ಧವಾಗಿರುವ ಟೀಂ ಇಂಡಿಯಾದ ಗಾಯಾಳುಗಳ ಪಟ್ಟಿಗೆ ಇಬ್ಬರು ಸೇರಿಕೊಂಡಂತಾಗಿದ್ದು ಕಳವಳದ ಸಂಗತಿಯಾಗಿದೆ.
ನೆಟ್ಸ್ ನಲ್ಲಿ ಪಂತ್ ಗೆ ಗಾಯ ಇದೀಗ ರಿಷಬ್ ಪಂತ್ ಅವರು ಗಾಯಕ್ಕೀಡಾಗಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ. ಭಾನುವಾರ ನೆಟ್ ಪ್ರ್ಯಾಕ್ಟೀಸ್ ಮಾಡುತ್ತಿದ್ದ ವೇಳೆ ಅವವರ ಕಾಲಿಗೆ ಚೆಂಡು ಬಡಿದಿದ್ದರಿಂದ ಅವರು ಕುಸಿದು ಬಿದ್ದರು.