ಬೆಂಗಳೂರು: ಆಸ್ಪತ್ರೆಗೆ ಹೋಗಿ ಹಿಂತಿರುವಾಗ ರಾತ್ರಿ ಸುಮಾರು 11:30 ಗಂಟೆಗೆ ನಾಲ್ಕು ಜನ ಅಪರಿಚಿತರು ಹಿಂಬಾಲಿಸಿ ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸುವ ಸಮಯದಲ್ಲಿ ಎರಡು ದ್ವಿಚಕ್ರ ವಾಹನದಲ್ಲಿ ಬಂದು ಚಾಕುವಿನಿಂದ ಬೆದರಿಸಿ, ಕೈಗೆ ಗಾಯಗೊಳಿಸಿ ಕುತ್ತಿಗೆಯಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರ ಅಪರಿಸಿ ಕೊಂಡು ಹೋಗಿರುವ ಘಟನೆ ವರದಿ ಆಗಿರುತ್ತದೆ.
ಮಾರತಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುನಿಸ್ವಾಮಿ ಲೇಔಟ್ ನ ತರಚೇರಿ ಹೋಟೆಲ್ ಬಳಿ ಇರುವ ಮನೆಯ ಮುಂದೆ ವಿಜಯಲಕ್ಷ್ಮಿ ಮತ್ತು ಅವರ ಗಂಡ ದ್ವಿಚಕ್ರ ವಾಹನ ನಿಲ್ಲಿಸುವ ಸಮಯದಲ್ಲಿ ಈ ಘಟನೆ ನಡೆದಿರುತ್ತದೆ.ಮಾರತಳ್ಳಿ ಪೊಲೀಸರು ದೂರುದಾಖಲಿಸಿ ಕೊಂಡು ತನಿಖೆ ಮುಂದುವರಿಸಿರುತ್ತಾರೆ. ಸ್ಥಳಕ್ಕೆ ವೈಟ್ಫೀಲ್ಡ್ ಡಿಸಿಪಿ ಶಶಿಕುಮಾರ್ ರವರು ಭೇಟಿ ನೀಡಿ ಪರಿಶೀಲಿಸಿರುತ್ತಾರೆ.