ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ರಾಜಮನೆತನದ ವಿರೋಧ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಪ್ರಾಧಿಕಾರ ಮಾಡುವ ಉದ್ದೇಶ ಅಲ್ಲಿ ಸಮರ್ಪಕವಾಗಿ ಚೆನ್ನಾಗಿ ಆಡಳಿತ ನಡೆಯಲಿ ಎಂಬ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರವರ ಹೇಳಿಕೆ ಮಾಧ್ಯಮದಲ್ಲಿ ನೋಡಿದ್ದೇವೆ, ಕೆಲವು ದೇವಸ್ಥಾನ ಗಳಿಗೆ ಸಂಬಂಧಪಟ್ಟಂತೆ ಪ್ರಾಧಿಕಾರ ರಚನೆ
ಮಾಡಲಾಗಿದೆ. ಸವದತ್ತಿಯಲ್ಲಿದೆ, ಅಲ್ಲಿ ಸಾಕಷ್ಟುಹಣ ಕಲೆಕ್ಟ್ ಆಗತಾಯಿತ್ತು. ಅಲ್ಲಿಗೆ ಬರುವವ-ರಿಗೆ ಮೂಲಸೌಕರ್ಯ ಒದಗಿಸುವುದಕ್ಕೆ ಹಣ ಬಳಕೆ ಮಾಡುತ್ತಾರೆ. ಇದಕ್ಕಾಗಿ ಒಂದು ಪ್ರಾಧಿಕಾರ ಇದ್ದರೆ ಒಳ್ಳೆಯದು.
ಅದೇ ರೀತಿ ಚಾಮುಂಡಿಬೆಟ್ಟ ವಿಚಾರದಲ್ಲೂ ಮಾಡಲಾಗಿತ್ತು ಈಗ ಅವರು ಆಕ್ಷೇಪ ಮಾಡಿದ್ದಾರೆ. ಮುಂದೆ ಕಾನೂನಾತ್ಮಕವಾಗಿ ಏನಾಗತ್ತೆ ನೋಡೋಣ ಎಂದಿದ್ದಾರೆ. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಡ ಹೆಚ್ಚಾದ ಹಿನ್ನೆಲೆ ಒತ್ತಡ ಇದೆ, ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ
ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಾವು ಹೇಳಿದ್ದೇವೆ. ಛಲವಾದಿ ನಾರಾಯಣ ಸ್ವಾಮಿಗೆ ಪ್ರೋಟೋಕಾಲ್ ನೀಡದ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಏನು ಕೊಡಬೇಕು ನಮ್ಮ ಪ್ರೋಟೋಕಾಲ್ ಪ್ರಕಾರ ಡಿಪಿಆರ್ ನವರು ನಿರ್ದಿಷ್ಟವಾಗಿ ಮಾಡಿರುತ್ತಾರೆ.
ನನಗೋಸ್ಕರ ಆಗಲೀ ನಾರಾಯಣಸ್ವಾಮಿ ಅವರಿಗೋಸ್ಕರ ನಿಯಮ ಇಲ್ಲ. ಮೇಲ್ಮನೆ ವಿಪಕ್ಷ ನಾಯಕರಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಇನ್ನೂ ಕೊಟ್ಟಿಲ್ಲ ಅಂತ ಹೇಳಿದ್ರೆ ನಾನು ಅವರಿಗೆ ಸೂಚನೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.