ಕೋಲ್ಕತಾ: ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ ಅರ್ಶದೀಪ್ ಸಿಂಗ್ 2 ವಿಕೆಟ್ ಕೀಳುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಒಟ್ಟು 97 ವಿಕೆಟ್ ಗಳಿಸುವ ಮೂಲಕ ಭಾರತದ ಪರ ಚುಟುಕು ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟಿ20 ಪಂದ್ಯದ ಪ್ರಥಮ ಓವರ್ ನ ಎರಡನೇ ಎಸೆತದಲ್ಲೇ ಅವರು ಅಪಾಯಕಾರಿ ಆರಂಭಿಕ ಫಿಲ್ ಸಾಲ್ಟ್ ಅವರನ್ನು ಬಲಿ ಪಡೆದರು. ಅವರ ಎಸೆತವನ್ನು ತಪ್ಪಾಗಿ ಅಂದಾಜಿಸಿದ ಸಾಲ್ಟ್ ಹೊಡೆದ ಚೆಂಡು ಆಗಸದೆತ್ತರಕ್ಕೆ ಚಿಮ್ಮಿತು. ಅದನ್ನು ಕ್ಯಾಚ್ ಪಡೆಯುವಲ್ಲಿ ಕೀಪರ್ ಸ್ಯಾಮ್ಸನ್ .ಯಾವುದೇ ತಪ್ಪು ಮಾಡಲಿಲ್ಲ.
ಇದಾಗಿ ಕೆಲವೇ ಹೊತ್ತಲ್ಲೇ ಇಂಗ್ಲೆಂಡಿಗೆ ಅರ್ಶದೀಪ್ ಮತ್ತೊಂದು ಹೊಡೆತ ನೀಡಿದರು. 3ನೇ ಓವರ್ ನ 5ನೇ ಎಸೆತದಲ್ಲಿ ಮತ್ತೊಬ್ಬ ಆರಂಭಕಾರ ಬೆನ್ ಡಕೆಟ್ ಅವರನ್ನು ರಿಂಕು ಸಿಂಗ್ ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿ ಯಾದರು.