ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿಯ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ 2023-24ನೇ ಸಾಲಿನ ಜಮಾ ಬಂಧಿ ಕಾರ್ಯಕ್ರಮ ನಡೆಯಿತು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷದಲ್ಲಿ ಆಗಿರುವ ವಿವಿಧ ರೀತಿಯ ಕಾರ್ಯಕ್ರಮಗಳು, ಕಾಮಗಾರಿಗಳು ಯೋಜನೆಗಳಿಗೆ ಸಂಬಂಧಿಸಿದಂತೆ ಆಗಿರುವ ಖರ್ಚು ವೆಚ್ಚಗಳ ಬಗ್ಗೆ ಜಮಾ ಬಂಧಿ ಕಾರ್ಯಕ್ರಮ ಮಾಡಲಾಗುವುದು ಎಂದು ಜಮಾ ಬಂಧಿಯ ಸಹಾಯಕ ಅಧಿಕಾರಿ ಅಂಬರೀಷ್ ಅವರು ತಿಳಿಸಿದರು.
ಪ್ರತಿಯೊಬ್ಬ ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು, ನಾಗರಿಕರು, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ ಎಂ ರಾಮಪ್ರಸಾದ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಸ್ವರ್ಣಲತ ರವರು ಮಾಹಿತಿ ಒದಗಿಸಿದರು.
ಗ್ರಾ ಪಂ ಅಧ್ಯಕ್ಷ ರಾಮಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ, ಸ್ವಚ್ಛತೆ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿ ವರ್ಷದ ಜಮಾ ಖರ್ಚಿನ ವಿವರಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮ ವೆಂಕಟೇಶ್, ಜಮಾ ಬಂಧಿ ನೋಡಲ್ ಅಧಿಕಾರಿ ಬೈರಾರೆಡ್ಡಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬೀರೇಶ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಭಗವಾನ್ ಗುರು,
ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಂದ್ರ ಗೋಪಾಲ್, ಕಾರ್ಯದರ್ಶಿಗಳಾದ ಸ್ವರ್ಣಲತ, ಲೆಕ್ಕಾಧಿಕಾರಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ರಾಘವೇಂದ್ರ ಪ್ರಸಾದ್, ಸತೀಶ್ ರೆಡ್ಡಿ, ವೆಂಕಟಪ್ಪ, ಕುಮಾರ್, ಗಾಯಿತ್ರಿ, ಗಿರಿಜಾ ನಾಗೇಶ್ ಹಾಗೂ ಇತರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ವೆಂಕಟೇಶಪ್ಪ, ಮಾದೇಶ್, ಮುರುಗೇಶ, ಗ್ರಂಥಾಲಯ ಮೇಲ್ವಿಚಾರಕರಾದ ನಾರಾಯಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.