ಚಿಕ್ಕಬಳ್ಳಾಪುರ: ನಾನು ಶಾಸಕನಾಗಿ ಸಚಿವನಾಗಿದ್ದಾಗ ನೀಟ್ ಪರೀಕ್ಷೆ ಬರೆಯಲು ನಮ್ಮಜಿಲ್ಲೆಯಲ್ಲಿಯೇ ಪರೀಕ್ಷಾ ಕೇಂದ್ರಗಳನ್ನ ತೆರೆದು ಅನುಕೂಲ ಮಾಡಿಕೊಟ್ಟಿದ್ದೆ ಆದರೆ ಈ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಅನಿವಾರ್ಯವಾಗ ಬೆಂಗಳೂರಿಗೆ ಹೋಗಬೇಕಾದ ದುಸ್ತಿತಿ ಉಂಟಾಗಿದೆ ಈಗಲೂ ಸಾದ್ಯವಾದ್ರೆ ಕರ್ನಾಟಕ ಪರೀಕ್ಷಾ ಪ್ರಧಿಕಾರದ ಬಳಿ ಚರ್ಚಿಸಿ ಕೇಂದ್ರ ಇಲ್ಲಿಯೆ ನಡೆಸಲು ಅವಕಾಶವಿದ್ರೆ ನಾನು ಪ್ರಯತ್ನಿಸುತ್ತೇನೆಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಸಿವಿವಿ 28 ವರ್ಷದ ದತ್ತಿ ದಿನಾಚರಣೆ ಅಂಗವಾಗಿ ನಗರದ ಪಿಪಿಹೆಚ್ ಎಸ್ ಶಾಲೆಯಲ್ಲಿ ಎರಡೂ ದತ್ತಿಗಳ ಸಿಬ್ಬಂದಿಗೆ ಸಾಂಸ್ಕೃತಿಕ ಚಟುವಟಿಕಾ ಸ್ಪರ್ದೆಗಳನ್ನ ಆಯೋಜಿಸಲಾಗಿತ್ತು ಸಾಂಸ್ಕೃತಿಕ ಸ್ಪರ್ದೆಗಳಿಗೆ ಸಂಸದ ಡಾ.ಕೆ.ಸುಧಾಕರ್ ಚಾಲನೆ ನೀಡಿದರುಈ ವೇಳೆ ಮಾತನಾಡಿದ ಅವರು ಎದೆಗೆ ಬಿದ್ದ ಅಕ್ಷರ ಭೂಮಿಗೆ ಹಾಕಿದ ಬೀಜ ಎಂದಾದರೊಂದು ದಿನ ಫಲ ನೀಡುತ್ತದೆ ಎನ್ನುವುದಕ್ಕೆ ಶಿಕ್ಷಣ ಪ್ರೇಮಿ ಮಾಜಿ ಶಾಸಕ ಸಿ.ವಿ. ವೆಂಕಟರಾಯಪ್ಪನವರೆ ಸಾಕ್ಷಿಯಾಗಿದ್ದು ಅವರು ಪ್ರಾರಂಬಿಸಿದ ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರಬಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ ಆ ಸಂಸ್ಥೆಗಳನ್ನು ಅಷ್ಟೆ ಗಂಬೀರವಾಗಿ ನಡೆಸುತ್ತಿರುವ ಅವರ ಪುತ್ರ ವಾರಸುಧಾರ ಕೆ.ವಿ.ನವೀನ್ ಕಿರಣ್ ರವರು ಪೋಷಕರಿಗೆ ಅಚ್ಚುಮೆಚ್ವಿನ ಅಧ್ಯಕರಾಗಿದ್ಸಾರೆ.
ಅವರು ಶಿಕ್ಷಣ ಕಲಿಯುವ ಮಕ್ಕಳಿಗೆ ಹೆಚ್ಚು ರಿಯಾಯಿತಿ ಕೊಟ್ಟು ಪ್ರೀತಿಪಾತ್ರರಾಗಿದ್ದಾರೆ.ಅವರಿಗೆ ಇನ್ನಷ್ಟು ಮತ್ತಷ್ಟು ಶಿಕ್ಷಣ ಕ್ಷೇತ್ರ ಅಭಿವೃದ್ದಿ ಮಾಡಲು ಅವಕಾಶಗಳು ಒದಗಿಬರಲಿ ಎಂದು ಆಶಿಷಿದ ಅವರು ನೀಟ್ ಪರೀಕ್ಷೆ ವಿಚಾರದಲ್ಲಿ ದೇಶದಲ್ಲಿ ಅಲ್ಲೋಲಕಲ್ಲೋಲ ನಡೆದಿದೆ ನಾನು ಅಧಿಕಾರದಲ್ಲಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಮಕ್ಕಳು ಪರೀಕ್ಷೆ ಬರೆಯಲು ಜಿಲ್ಲೆಯಲ್ಲೆ ಪರೀಕ್ಷಾ ಕೇಂದ್ರ ಮಾಡಿಸಿದ್ದೆ ಆದರೆ ಈಗ ಒಂದೆ ಒಂದು ಪರಿಕ್ಷಾ ಕೇಂದ್ರವೂ ತೆರೆಯುವುದಿಲ್ಲ ಇಲ್ಲಿನ ಮಕ್ಕಳೆಲ್ಲಾ ಬೆಂಗಳೂರಿಗೆ ಹೋಗಬೇಕಾಗಿದೆ ಆದ್ದರಿಂದ ಈಗಲು ಅವಕಾಶ ಇದೆ ಕರ್ನಾಟಕ ಪರಿಕ್ಷಾ ಪ್ರಾಧಿಕಾರದಲ್ಲಿ ಉಸ್ತುವಾರಿ ಮಂತ್ರಿಗಳು ಪ್ರಯತ್ನಿಸಿ ಇಲ್ಲಿಯೆ ಕೇಂದ್ರ ಕೊಡಿಸಲಿ ನಾನು ಕೇಂದ್ರದಿಂದ ಒತ್ತಾಯ ಹೇರುವ ಕೆಲಸ ಮಾಡುತ್ತೇನೆ ಎಂದರು.
ಇಂದು ನಡೆದ ಸಾಂಸ್ಕೃತಿಕ ಸ್ಪರ್ದೆಯಲ್ಲಿ ಕೆವಿ ಮತ್ತು ಸಿವಿವಿ ಟ್ರಸ್ಟ್ ನ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಎಂಜಾಯ್ ಮಾಡಿದರು. ಸಾಕಷ್ಟು ಶಿಕ್ಷಕರು ಬಹುಮಾನ ಗೆಲ್ಲಲ್ಲು ತವಕದಲ್ಲಿದ್ದರು ಜಾನಪದ ಚರ್ಚಾ ಸ್ಪರ್ದೆ ಮೆಮೋರಿ ಟೆಸ್ಟ್,ಅಂತ್ಯಾಕ್ಷರಿ ಹೀಗೆ ಹತ್ತು ಹಲವು ಚಟುವಟಿಕೆಗಳಿಲ್ಲಿ ಪಾಲ್ಗೊಂಡು ತಮ್ಮ ಪ್ರತಿಬೆಗಳನ್ನ ತೋರುತಿದ್ದರು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಶಿಕ್ಷಣ ಸಂಸ್ತೆಗಳ ಪೈಕಿ ಕೆವಿ ವಿದ್ಯಾದತ್ತಿ ಮಾತ್ರ ಸಿಬ್ಬಂದಿಗೂ ಮಕ್ಕಳಂತೆ ಎಲ್ಲಾ ಸಾಂಸ್ಕೃತಿಕ ಚಟುವಟಿಕೆ ಸ್ಪರ್ದೆಗಳನ್ನ ನಡೆಸಿ ಅವರಿಗೂ ಬಹುಮಾನ ಕೊಡುವ ಪದ್ದತಿಯನ್ನ ರೂಡಿಸಿಕೊಂಡಿದೆ ಎಂದು ಸುಧಾಕರ್ ಗುಣಗಾನ ಮಾಡಿದರು.
ಈ ವೇಳೆ ಡಾ.ಕೆ.ಸುಧಾಕರ್ಗೆ ಎರಡೂ ದತ್ತಿಗಳ ಎಲ್ಲಾ ಸಂಸ್ಥೆಗಳು ನೂತನವಾಗಿ ಸಂಸದರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅಧ್ಯಕ್ಷ ಕೆ.ವಿ ನವೀನ್ ಕಿರಣ್ ಟ್ರಸ್ಟಿಗಳಾದ ಮುನಿಯಪ್ಪ, ಪ್ರಭುಸಾಯಿ,ಸುಜಾತ ನವೀನ್ ಕಿರಣ್,ಶ್ರೀನಿವಾಸ್,ನಿರ್ಮಲಾ ಪ್ರಭು, ಇಮ್ರಾನ್ ಖಾನ್, ಸಾಂಸ್ಕೃತಿಕ ಚಟುವಟಿಕೆ ಸಮಿತಿ ಅಧ್ಯಕ್ಷ ಮಹಾಂತೇಶ್ ಕಟಮಾಪುರ ಇತರರು ಇದ್ದರು.