ಚಿಕ್ಕಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಾನೂನುಅರಿವು ಮತ್ತು ವತಿಯಿಂದ ಪೂಜಿಸಿ ಇಲಾಖೆ ನೆರವು ಕಾರ್ಯಕ್ರಮ ಹಾಗೂ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮಕ್ಕೆ ಗೌರವಾನ್ವಿತ ಜಿಲ್ಲಾ ಮತ್ತು ಸೂತ್ರ ನ್ಯಾಯಾಧೀಶರಾದ ನೇರಳೆ ಭದ್ರಯ್ಯ ಭವಾನಿರವರು ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾವು ಜಿಲ್ಲಾ ನ್ಯಾಯಾಲಯದ ಆವರಣದಿಂದ ಆರಂಭಗೊಂಡು ಶಿಡ್ಲಘಟ್ಟ ಸರ್ಕಲ್ ನ ಮೂಲಕ ಸಾಗಿ ಅಂಬೇಡ್ಕರ್ ಭವನ ಮರಳಿ ನ್ಯಾಯಾಲಯದ ಬಳಿ ಮುಕ್ತಾಯವಾಯಿತು.ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮವು ಜಿಲ್ಲೆಯಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುವ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಮತಿ ಬಿ.ಶಿಲ್ಪ, ಹಿರಿಯ ಸಿವಿಲ್ ನ್ಯಾಯಾದೀಶರು ಮತ್ತು ಸದಸ್ಯ ಕಾರ್ಯದರ್ಶಿಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀ ಅನಿಲ್ ಮಾನ್ಯ ತಹಸಿಲ್ದಾರ್, ಸಿ.ಇ.ಓ. ತಾ.ಪಂ. ಮಂಜುನಾಥ್, ಉಮಾಶಂಕರ್, ನಗರಸಭಾ ಆಯುಕ್ತರು, ಆರ್ ಶ್ರೀನಿವಾಸ್ ವಕೀಲರ ಸಂಘದ ಅಧ್ಯಕ್ಷರು, ಎ.ಬಿ.ವಿ.ಪಿ. ಮಂಜು, ವಕೀ¯ ಗಾಂಧಿ, ಮುನಿಕೃಷ್ಣ, ಪ್ರಾಂಶುಪಾಲರು, ಗೋಲ್ಡನ್ ಗ್ಲೀಮ್ಸ್ ಕಾಲೇಜ್, ಮತ್ತಿತರರು ಭಾಗವಹಿಸಿದ್ದರು.