ಬೆಂಗಳೂರು: ಜಾತ್ರೆ, ಬಸ್ಗಳಲ್ಲಿ, ಸಂತೆಗಳಲ್ಲಿ ಮತ್ತು ಜನಸಂದಣಿ ಇರುವ ಜಾಗಗಳಲ್ಲಿ ಮಹಿಳೆಯರ ಗಮನ ಬೇರೆ ಸೆಳೆದು ಮಹಿಳೆಯರ ಕುತ್ತಿಗೆಯಲ್ಲಿದ್ದ ಮತ್ತು ಬ್ಯಾಗುಗಳಲ್ಲಿ ಇದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ಮಹಿಳಾ ಆರೋಪಿಯನ್ನು ಕೆ ಆರ್ ಪುರಂ ಪೊಲೀಸರು ಬಂಧಿಸಿರುತ್ತಾರೆ.
ಶಾರದಾ(40) ಚಿಕ್ಕಮಗಳೂರು ಜಿಲ್ಲೆ, ಬೀರೂರು ತಾಲೂಕಿನ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಸುಮಾರು 586 ಗ್ರಾಂ ಚಿನ್ನಾಭರಣಗಳು ವಶಪಡಿಸಿಕೊಂಡಿರುತ್ತಾರೆ ಇವುಗಳ ಮೌಲ್ಯ 40 ಲಕ್ಷ ರೂಪಾಯಿಗಳಾಗಿರುತ್ತವೆ.ಇವಳು ದೋಚಿದ್ದ ಚಿನ್ನಾಭರಣಗಳನ್ನು ಗಂಡ ಹಾಗೂ ತಂದೆಯ ಹೆಸರಿನಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಟೌನ್ ಬ್ಯಾಂಕ್ ಗಳಲ್ಲಿ ಗಿರವಿ ಇಟ್ಟಿದ್ದಳು.
ಇವಳಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಅಪ್ರಾಪ್ತ ಬಾಲಕಿಯನ್ನು ಸಹ ಬಂಧಿಸಿರುತ್ತಾರೆ.ಒಟ್ಟು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಾಲಕ್ಕು ಕೆ ಆರ್ ಪುರಂ ಪ್ರಕರಣ ಬಗಲಗುಂಟೆ ಅನ್ನಪೂರ್ಣೇಶ್ವರಿ ನಗರ ಮತ್ತು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಮೇಣ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.