ಹೊಸದಿಲ್ಲಿ : ಒಲಿಂಪಿಕ್ಸ್ನಲ್ಲಿ ಮೂರನೇ ವೈಯಕ್ತಿಕ ಪದಕ ಗೆದ್ದಿರುವ ಮೊದಲ ಭಾರತೀಯ ಅತ್ಲೀಟ್ ಆಗುವ ನನ್ನ ಕನಸನ್ನು ಈಡೇರಿಸಲು ಪ್ಯಾರಿಸ್ನಲ್ಲಿ ನನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಹೇಳಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವ ಸಿಂಧೂ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಜಿಯೋ ಸಿನೇಮಾದ ‘ದ ಡ್ರೀಮರ್ಸ್’ನಲ್ಲಿ ವಿಶೇಷ ಸಂಭಾಷಣೆಯಲ್ಲಿ ಪಾಲ್ಗೊಂಡಿರುವ ಸಿಂಧೂ, ಪ್ಯಾರಿಸ್ನಲ್ಲಿ ಇತಿಹಾಸ ನಿರ್ಮಿಸುವ ನನ್ನ ಗುರಿಯಿಂದ ಕಿಂಚಿತ್ತೂ ವಿಚಲಿತರಾಗಿಲ್ಲ ಎಂದು ಹೇಳಿದ್ದಾರೆ.
‘’ಪ್ಯಾರಿಸ್ನ ಆ ಮೂರನೇ ಪದಕವು ನನ್ನನ್ನು ಖಂಡಿತವಾಗಿಯೂ ಉತ್ತೇಜಿಸಿದೆ. ಆ ಚಿನ್ನದ ಪದಕವನ್ನು ಪಡೆಯಲು ನಾನು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ನಾನು ನನ್ನ ಸಾಮರ್ಥ್ಯದ 200 ಶೇಕಡವನ್ನು ನೀಡುತ್ತೇನೆ’’ ಎಂದು ಸಿಂಧು ನುಡಿದರು.