ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಚೌಡನಹಳ್ಳಿ ಗ್ರಾಮದಲ್ಲಿ ಸರಕಾರಿ ಜಾಗ ಒತ್ತುವರಿ ತೆರವು ಕಾರ್ಯದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.ಕನ್ನಮಂಗಲ ಗ್ರಾಪಂ ಪಿಡಿಒ ಶ್ರೀನಿವಾಸ್ ಮಾತನಾಡಿ ನಿವೇಶನ ರಹಿತರಿಗೆ ನಿವೇಶನ ಹಂಚುವುದಕ್ಕಾಗಿ ಜಿಪಂಸಿಇಒ, ತಾಪಂ ಇಒ ಮಾರ್ಗದರ್ಶನದಲ್ಲಿ ಗ್ರಾಪಂ ಅಧ್ಯಕ್ಷರ,
ಉಪಾಧ್ಯಕ್ಷರ ಮತ್ತು ಸದಸ್ಯರ ತೀರ್ಮಾನದಂತೆ ಜಾಗವನ್ನು ಗುರ್ತಿಸಿ ನಿವೇಶನಗಳಿಗೆ ಕ್ರಮವಹಿಸಲಾಗುತ್ತಿದೆ.
ಸ್ಥಳೀಯವಾಗಿ ಗ್ರಾಮಸ್ಥರ ಸಹಕಾರದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 4ಎಕರೆ 31ಗುಂಟೆ ಸರಕಾರಿ ಗ್ರಾಮ ಠಾಣಾದ ಜಾಗವು ಒತ್ತುವರಿಯಾಗಿದ್ದರಿಂದ ಅದನ್ನು ನೊಟೀಸ್ ಜಾರಿ ಮಾಡಿ, ತೆರವುಗೊಳಿಸಲು ಮುಂದಾಗಲಾಗಿದೆ. ಗ್ರಾಮಸ್ಥರು ಸಹ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ಭೂ ಮಾಪಕ ಶಿವಣ್ಣ, ಪೊಲೀಸ್ ಸಿಬ್ಬಂದಿ, ಊರಿನ ಗ್ರಾಮಸ್ಥರು ಇದ್ದರು.