ಕೆ.ಆರ್.ಪೇಟೆ: ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿದರು.
ಶ್ರೀ ಧರ್ಮಸ್ಥಳ ಸಂಘದ ಚನ್ನರಾಯಪಟ್ಟಣ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಆರ್.ಟಿ. ಓ ಮಲ್ಲಿಕಾರ್ಜುನ್ ರವರನ್ನ ಜಿಲ್ಲಾ ನಿರ್ದೇಶಕರು ಸರ್ವಾನುಮತದಿಂದ ಬೆಂಬಲಿಸಿದ ಹಿನ್ನೆಲೆ.
ಚನ್ನರಾಯಪಟ್ಟಣದಲ್ಲಿರುವ ಶ್ರೀ ಧರ್ಮಸ್ಥಳ ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿತಾಯಿ ಸಮ್ಮುಖದಲ್ಲಿ ಹಾಗೂ ಸರ್ವ ನಿರ್ದೇಶಕರ ಸಮ್ಮುಖದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಧಿಕಾರ ಸ್ವೀಕರಿಸಿದರು.ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿತಾಯಿ ಆರ್.ಟಿ.ಓ ಮಲ್ಲಿಕಾರ್ಜುನ್ ಪ್ರಸ್ತುತ ನಮ್ಮ ಜಿಲ್ಲಾ ಜನಜಾಗೃತಿಯ ಉಪಾಧ್ಯಕ್ಷರಾಗಿದ್ದರು ಅವರ ಕ್ರಿಯಾಶೀಲತೆ ಸೇವಾ ಮನೋಭಾವನೆಯ ಸರಳತೆಯನ್ನು ಪರಿಗಣಿಸಿ ಸರ್ವ ನಿರ್ದೇಶಕರು ಸರ್ವಾನುಮತದ ಮೇರೆಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.
ಆರ್ ಟಿ ಓ ಮಲ್ಲಿಕಾರ್ಜುನ್ ರವರು ಪ್ರಸ್ತುತ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷರಾಗಿ ಸಮಾಜ ಸೇವೆಯಲ್ಲೂ ಹೆಸರು ಮಾಡಿರುವ ಸೇವಾ ಮನೋಭಾವನೆಯ ಅವರು ನಮ್ಮ ಶ್ರೀ ಧರ್ಮಸ್ಥಳ ಸಂಘದ ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ನೂತನ ಅಧ್ಯಕ್ಷರಾಗಿ ಆರ್. ಟಿ.ಓ ಮಲ್ಲಿಕಾರ್ಜುನ್ ನಿಜಕ್ಕೂ ಸಂತಸ ತಂದಿದೆ ಅವರ ಅಧ್ಯಕ್ಷತೆಯಲ್ಲಿ ಮಾನ್ಯ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಪ್ರತಿಯೊಂದು ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪುವ ನಿಟ್ಟಲ್ಲಿ ಇವರ ಕಾಯಕ ಸೇವೆ ಪ್ರಾಮಾಣಿಕವಾಗಿ ಮುಂದುವರಿಯಲಿ ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಾಗಿರದೇ ಸಮಾಜ ಸುಧಾರಣೆ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದೆ. ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ಹೆಗ್ಗಡೆ ಅವರಿಂದ ನನಸಾಗುತ್ತಿದೆ ಯಾವುದೇ ಸಂಘ ಸಂಸ್ಥೆಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ.
ಸ್ವಸಹಾಯ ಸಂಘಗಳ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಗೆ ಆಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಪುಣ್ಯ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವುದೇ ನನ್ನ ಸೌಭಾಗ್ಯ ಇಂತಹ ಸಂದರ್ಭದಲ್ಲಿ ಸರ್ವಾನುಮತದಿಂದ ಬೆಂಬಲಿಸಿ ಜಿಲ್ಲಾ ಜನ ಜಾಗೃತಿ ವೇದಿಕೆ ಗೌರವಾನ್ವಿತ ನೂತನ ಅಧ್ಯಕ್ಷರಾಗಲು ಕಾರಣಿ ಕರ್ತರಾದಗಿ ಜವಾಬ್ದಾರಿ ಹೆಚ್ಚಿಸಿರುವ ನಿಮ್ಮೆಲ್ಲರಿಗೂ ಹಾಗೂ ಪೂಜ್ಯರಿಗೂ ಋಣಿಯಾಗಿ ಗೌರವ ತರುವ ನಿಟ್ಟಿನಲ್ಲಿ ಶ್ರಮವಹಿಸುತ್ತೇನೆ ಎಂದು ಭರವಸೆ ನುಡಿದರು.
ಆರ್.ಟಿ.ಓ ಮಲ್ಲಿಕಾರ್ಜುನ್ ಅಧ್ಯಕ್ಷರಾಗುತ್ತಿದ್ದಂತೆ ಬೆಂಬಲಿಗರು ಅಭಿಮಾನಿಗಳಿಂದ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಜನಜಾಗೃತಿ ವೇದಿಕೆ ನೂತನ ಉಪಾಧ್ಯಕ್ಷರಾಗಿ ನಳಿನ, ಉಮೇಶ್, ಪುಟ್ಟಸ್ವಾಮಪ್ಪ, ಅವರನ್ನ ಆಯ್ಕೆಯದರು.ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ನಿರ್ಗಮನ ಜಿಲ್ಲಾ ಅಧ್ಯಕ್ಷ ಜಯರಾಮ್ ತೋಟಿ, ಸದ್ಯಸರುಗಳಾದ ಕೆ.ಆರ್ ರಾಜೇಶ್, ಪ್ರಸನ್ನಕುಮಾರ್, ಜ್ಯೋತಿ, ಸುನಿತಾ, ಭಾರತಿ, ಮೊಟ್ಟೆ ಮಂಜು, ನಾರಾಯಣಗೌಡ, ಕುಮಾರ್, ಶಿವರಾಮು, ಸುಧಾ, ಶಾಲಿನಿ, ಚನ್ನೇಗೌಡ, ವಿರೂಪಾಕ್ಷ, ಜಗನಾಥ್, ಹರೀಣಾಕ್ಷಿ, ಯೋಜನಾಧಿಕಾರಿಗಳಾದ ತಿಲಕ್ ರಾಜು, ಪ್ರಸಾದ್, ಸೂರ್ಯನಾರಾಯಣ, ಸದಾಶಿವ ಕುಲಾಲ್, ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್, ಕೆ ಆರ್ ನೀಲಕಂಠ, ಕಿಕ್ಕೇರಿ ಬಲರಾಮ್, ಆರ್ ಎಸ್ ಎಸ್ ಮಂಜುನಾಥ್, ಸೇರಿದಂತೆ ಧರ್ಮಸ್ಥಳ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.