ಇತ್ತೀಚಿಗೆ ಬಿಡುಗೆಗೊಂಡ ಲೆಜೆಂಡ್ ಡೈರೆಕ್ಟರ್ ಸಿನಿಮಾ ಗೆಲುವಿನ ಒಂದು ತಿಂಗಳ ಸಂಭ್ರಮಾಚರಣೆಯನ್ನು ಆಚರಿಸಕೊಂಡಿತ್ತು. ಈ ಸಮಾರಂಭದಲ್ಲಿ ಲೆಜೆಂಡ್ ಡೈರೆಕ್ಟರ್ ಸಿನಿಮಾಗಾಗಿ ದುಡಿದ ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ಹಾಗೂ ಸಿನಿಮಾ ಗೆಲುವಿಗೆ ಕಾರಣೀಭೂತರಾದ ಅಭಿಮಾನಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಇದೇ ಸಂತೋಷದ ಸಮಯದಲ್ಲಿ ಹ್ಯಾಟ್ರಿಕ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ರಾದ ನಟ, ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ಯವರ ನೂತನ ಚಿತ್ರ ” ಜನರಿಂದ ನಾನು ಮೇಲೆ ಬಂದೆ” ಎಂಬ ಟೈಟಲ್ ಕೂಡ ಅನಾವರಣಗೊಂಡಿತ್ತು.ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರಾದ ಎಸ್ ಎ ಚಿನ್ನೇಗೌಡರು, ಶ್ರೀಮತಿ ಶೈಲಜಾ ದ್ವಾರಕೀಶ್, ದೇವರಾಜ್ ಗೌಡ, ಗಂಡಸಿ ಸದಾನಂದ ಸ್ವಾಮಿ, ಸತ್ಯಜಿತ್, ರಮಣ ಕಣಗಾಲ್, ಶಿವಕುಮಾರ್ ಆರಾಧ್ಯ, ಸಂದೀಪ್ ಮಾಲನಿ, ಶಿವಣ್ಣ, ಗಂಧರ್ವ ರಾಜ್, ಶ್ರೀಮತಿ ವಿಶಾಲ ಸತೀಶ್, ಪ್ರಣವ್ ಸತೀಶ್ ಉಪಸ್ಥಿತರಿದ್ದರು.
ಜನರಿಂದ ನಾನು ಮೇಲೆ ಬಂದೆ ಸಿನಿಮಾದಲ್ಲಿ ಲೆಜೆಂಡ್ ಡೈರೆಕ್ಟರ್ ಸಿನಿಮಾದಲ್ಲಿ ಜನ ಮೆಚ್ಚಿದ ಕುಚುಕು ಜೋಡಿ ಆದ ಗಂಧರ್ವ ರಾಜ್ ( ಶಂಕರ) ಮತ್ತು ನವಿಲುಗರಿ ನವೀನ್ ಪಿ ಬಿ ಇಬ್ಬರು ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ, ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶದ ಜವಾದ್ದರಿಯನ್ನು ನವಿಲು ಗರಿ ನವೀನ್ ಪಿ ಬಿ ಹೊತ್ತುಕೊಂಡಿದ್ದಾರೆ. ಮೊದಲ ಬಾರಿ ನಿರ್ಮಾಪಕರಾಗಿ ಶ್ರೀಮತಿ ಹೇಮಾವತಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ ಅತೀ ಶ್ರೀಘ್ರದಲ್ಲೇ ಚಿತ್ರೀಕರಣ ಶುರುಮಾಡಲಿದ್ದೇವೇ ಎಂದು ಚಿತ್ರದ ನಿರ್ದೇಶಕರು ತಿಳಿಸಿದರು.