ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಇಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದ್ದು 30 ಅರ್ಜಿಗಳು ಬಂದಿದೆ ಎಂದು ತಿಳಿಸಿದ್ದರು.
ಇದೆ ವೇಳೆ ಸುದ್ದಿಗರೊಂದಿಗೆ ಮಾತಾನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ನಗರಸಭೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿಗಳಲ್ಲಿ 90ರಷ್ಟು ಬಗೆಹರಿಸಬಹುದಾದ ಅರ್ಜಿಗಳು ಬಂದಿದೆ ಮತ್ತು ನಗರಸಭೆಯ ವಾರ್ಡ್ಗಳಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಯಿತು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಮಂಗಳವಾರ ದಂದು 17 ಮಂದಿಗೆ ಕಚ್ಚಿರುವುದು ತಿಳಿದು ಬಂದಿದೆ ಹಾಗಾಗಿ ನಗರದಲ್ಲಿ ಹುಚ್ಚು ನಾಯಿಗಳು ಯಾವುದೆಂದು ಪತ್ತೆ ಹಚ್ಚಿ ಚುಚ್ಚುಮದ್ದು ನೀಡಿ ಕಚ್ಚದಂತೆ ಅಥವಾ ಕಾನೂನಿನಲ್ಲಿ ಯಾವ ರೀತಿ ಮಾಡಬಹುದು ಆ ರೀತಿ ಕ್ರಮ ಕೈಗೊಳ್ಳಲಾಗುವುದು ಅಂತಹ ನಾಯಿಗಳನ್ನು ಸೆರೆಹಿಡಿದು ಜನರಲ್ಲಿ ಇರುವಂತಹ ಆತಂಕವನ್ನು ದೂರ ಮಾಡುವ ಕೆಲಸವನ್ನು ಖಂಡಿತ ಮಾಡುತ್ತೇವೆ ಎಂದರು.
ನಗರದ ಅರವಿಂದ ನಗರ ಹಾಗೂ ಮುನೇಶ್ವರ ಬಡಾವಣೆಯಲ್ಲಿ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಗರಸಭೆ ರವರು ನಿರ್ಮಾಣ ಮಾಡಲು ಮುಂದಾಗಿದ್ದನ್ನು ತಡೆದು ಸೂಕ್ತ ರೀತಿಯಲ್ಲಿ ಕಾಮಗಾರಿ ಮಾಡಬೇಕು ಎಂದು ಶಾಸಕರಿಗೆ ಅರವಿಂದ್ ನಗರದ ವಾಸಿಗಳು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾಸಿಲ್ದಾರ್ ಮಹೇಶ್ ಪತ್ರಿ, ಆಯುಕ್ತರದ ಡಿ ಎಂ ಗೀತಾ,ಇಓ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಶ್ರೀನಿವಾಸ್ ಮೂರ್ತಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ತಾಲ್ಲೂಕು ಆಡಳಿತ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.