ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಎಸ್ ನರಸಿಂಹ ಸ್ವಾಮಿ ಟ್ರಸ್ಟ್ ಆಯೋಜಿಸಿದ್ದ ಕೆಎಸ್ನ ಜನ್ಮ ದಿನಾಚರಣೆ ಕಾರ್ಯಕ್ರಮ ಕಿಕ್ಕಿರಿದು ತುಂಬಿದ್ದ ಕೆಎಸ್ನ ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಕೆಎಸ್ನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧ್ವಜಾರೋಹಣವನ್ನೂ ನೆರವೇರಿಸಿ ಶುಭಾಶಯ ಕೋರಿದರು. ಖ್ಯಾತ ನಾಟಕಕಾರ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಅವರ ನೇತೃತ್ವ ದಲ್ಲಿ ಮೈಸೂರು ಮಲ್ಲಿಗೆ ನಾಟಕ ಮನಸೂರೆಗೊಂಡಿತು. ಕೆಎಸ್ನ ಕುರಿತು ಹಿರಿಯ ಕಲಾವಿದ ಶ್ರೀ ಪಿ ಶಿವಶಂಕರ್ ಮಾತನಾಡಿ ಕೆಎಸ್ನ ಬದುಕು ಜನರಿಗೆ ಮಾದರಿಯಾಗಿದೆ ಎಂದರಲ್ಲದೇ ಪ್ರೇಕ್ಷಕರ ಒತ್ತಾಯದ ಮೇರೆಗೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಗೀತೆಯನ್ನೂ ಹಾಡಿದರು.
ಕೆಎಸ್ನ ಗೀತೆಗಳಿಗೆ ನೃತ್ಯ ಹಾಗೂಪಿ ಎನ್ ಜಯರಾಂ,ರೂಪಾ, ಇಂದಿರಾ ಮತ್ತು ತಂಡದವರ ಗೀತೆಗಳು ಹಾಗೂ ಅಭಿಷೇಕ್ ರಾಮ ಪ್ರಸಾದ್ ತಂಡದವರ ವಾದ್ಯ ವೈಭವ ಮನಸೂರೆಗೊಂಡಿತು. ಸನತ್ ಬಳಗದ ದ್ವನಿ ಬೆಳಕು ಅಮೀಬಾ ಗ್ರೂಪ್ ನ ವೇದಿಕೆ ನಿರ್ಮಾಣ, ಜನಪದ ಕಲಾತಂಡಗಳ ಮೆರವಣಿಗೆ ಮನಸೆಳೆಯುವಂತಿತ್ತು.