ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಮೊದಲು ಜಮೀರ್ ಅಹ್ಮದ್ರನ್ನು ಕಿತ್ತೊಗೆಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಕ್ಫ್ ಭೂ ಕಬಳಿಕೆಯಲ್ಲಿ ಜಮೀರ್ ಅಹ್ಮದ್ ಸಂಚಿದೆ.
ಕಾಂಗ್ರೆಸ್ ಪಾರ್ಟಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ಅವರನ್ನು ಪಕ್ಷದಿಂದಲೇ ಕಿತ್ತೊಗೆಯಲಿ ಎಂದು ಆಗ್ರಹಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಈ ರಾಜ್ಯ ಮತ್ತು ದೇಶವನ್ನು ಇಸ್ಲಾಂಮೀಕರಣ ಮಾಡಲು ನಿಂತಿದ್ದು, ಎಲ್ಲೆಡೆ ಕೋಮು – ದ್ವೇಷ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.