ಜಮ್ಮುಕಾಶ್ಮೀರ: ಆಡಳಿತ ಹಾಗೂ ಪ್ರತಿಪಕ್ಷ ಶಾಸಕರ ನಡುವೆ ಪರಸ್ಪರ ಕೈಮಿಲಾಯಿಸಿ ಹೊಡೆದಾಟ ನಡೆದಿರುವ ಘಟನೆ ಇಂದು ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದAತೆ ರ್ಟಿಕಲ್ ೩೭೦ ಮರುಜಾರಿ ಸಂಬಂಧ ಅವಾಮಿ ಇತ್ಯೆಹಾರ್ ಪಕ್ಷದ ಸದಸ್ಯ ಖುರ್ಷಿದ್ ಅಹಮ್ಮದ್ ಅವರು ಬ್ಯಾನರ್ ಪ್ರದರ್ಶಿಸಿ ರ್ಟಿಕಲ್ ಜಾರಿ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು.
ಇದರಿಂದ ಉದ್ರಿಕ್ತಗೊಂಡ ಬಿಜೆಪಿ ಶಾಸಕರು ಖುರ್ಷಿದ್ ಅಹಮ್ಮದ್ ಅವರು ಪ್ರದರ್ಶಿಸುತ್ತಿದ್ದ ಬ್ಯಾನರ್ ಅನ್ನು ಕಸಿದುಕೊಂಡಾಗ ಈ ಸಂದರ್ಭದಲ್ಲಿ ಪಿಡಿಪಿ, ಎನ್ಸಿ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ಹೋಯಿತು. ಒಂದು ಹಂತದಲ್ಲಿ ಶಾಸಕರು ಪರಸ್ಪರ ಕೈಮಿಲಾಯಿಸಿ ಹೊಡೆದಾಡಿದ ಪ್ರಸಂಗವೂ ನಡೆಯಿತು.
ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ರದ್ದುಪಡಿಸಲಾಗಿದ್ದ ೩೭೦ನೇ ವಿಧಿಯನ್ನು ಮರು ಜಾರಿ ಮಾಡಿ ವಿಧಾನಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿತ್ತು. ಇದನ್ನು ಬಿಜೆಪಿ ಪಕ್ಷದ ಶಾಸಕರು ಪ್ರಬಲವಾಗಿ ವಿರೋಧಿಸಿದ್ದರು. ಆದರೆ ಆಡಳಿತ ರೂಢಾ ಪಕ್ಷ ಬಿಜೆಪಿ ವಿರೋಧದ ನಡುವೆ ರ್ಟಿಕಲ್ ೩೭೦ ಮರು ಜಾರಿ ಮಾಡಿನಿರ್ಣಯ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದAತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಾರೀ ಗದ್ದಲ ಏರ್ಪಟ್ಟು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.
ಇದರಿಂದಾಗಿ ಕಲಾಪವನ್ನು ಮುಂದೂಡಿದ ಪ್ರಸಂಗವೂ ನಡೆದಿದೆ.