ಬೆಂಗಳೂರು: ಹೋಲಿ ಸೈಂಟ್ ಹೈಸ್ಕೂಲ್, ಜಯನಗರ ತನ್ನ 50 ನೇ ವಾರ್ಷಿಕ ದಿನಾಚರಣೆಯನ್ನು ಡಿಸೆಂಬರ್ 21, 2024 ರಂದು JSS ಸಭಾಂಗಣದಲ್ಲಿ ಆಚರಿಸಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಅತಿಥಿಗಳಾಗಿ, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಡಾ.ಪಿ.ಜಿ.ದಿವಾಕರ್ ಇಸ್ರೋ ಚೇರ್ ಪ್ರೊಫೆಸರ್, ಶ್ರೀ ಎನ್.ಆರ್.ರಮೇಶ್, ಮಾಜಿ ಕಾರ್ಪೋರೇಟರ್, ಯಡಿಯೂರು, ಹೋಲಿ ಸೈಂಟ್ ಹೈಸ್ಕೂಲ್ ಪ್ರಧಾನ ಕಾರ್ಯದರ್ಶಿ ಎಸ್.ಎ.ಪಿ.ಖಾದ್ರಿ, ಪ್ರಾಂಶುಪಾಲರು ಸಲೇಹಾ ಖಾದ್ರಿ, ನಿರ್ದೇಶಕ ಸಲ್ಮಾನ್ ಖಾದ್ರಿ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.
ಶಾಲಾ ವಾರ್ಷಿಕ ದಿನಾಚರಣೆಯಲ್ಲಿ ಪಾಲಕರು,ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಮ್ಮಿ ಕೊಂಡಿದ್ದ ಈ ಕಾರ್ಯಕ್ರಮವು ವಿವಿಧ ಬಹುಭಾಷಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ವಿದ್ಯಾರ್ಥಿಗಳ ಕಲಾತ್ಮಕ ಮತ್ತು ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿತು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರದರ್ಶನ ಸರಣಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಇದು ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು.