ಬೆಂಗಳೂರು: ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಮಹಿಳೆ ನಿಕತ್ ಸುಲ್ತಾನ ಮತ್ತು ಇವಳ ಗಂಡ ಸಕ್ಲೈನ್ ಸುಲ್ತಾನ ಎಂಬು ತಿಲಕ ನಗರ ನಿವಾಸಿಗಳನ್ನು ಬಂಧಿಸಿ 66 ಲಕ್ಷ ರೂ ನಗದು ವಶಪಡಿಸಿಕೊಂಡಿರುತ್ತಾರೆ.ಈ ಆರೋಪಿಗಳಿಬ್ಬರು ವಿದೇಶಗಳಲ್ಲಿ ಉದಾಹರಣೆಗೆ-ನ್ಯೂಜಿಲ್ಯಾಂಡ್ ಆಸ್ಟ್ರೇಲಿಯಾ ಮತ್ತು ಇತರೆ ದೇಶಗಳಲ್ಲಿ ಜಾಕಿ ಕೆಲಸವನ್ನು ಅಂದರೆ ಕುದುರೆ ಓಡಿಸುವ ಕೆಲಸವನ್ನು ಕೊಡಿಸುತ್ತೇವೆ ಎಂದು ನಂಬಿಸಿ ಸುಮಾರು 56 ಜನಗಳಿಂದ 80 ಲಕ್ಷ ರೂ. ವಸೂಲಿ ಮಾಡಿದ್ದರು.
ರಾಜಸ್ಥಾನದ ಮಕ್ಸಿಂಗ್ ಎಂಬ ವ್ಯಕ್ತಿಯು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಬಂಧಿಸಿರುತ್ತಾರೆ.ಆರೋಪಿಗಳಿಬ್ಬರು ದಂಪತಿಗಳಾಗಿರುತ್ತಾರೆ. ಮತ್ತು ಮೂರು ಜನರಿಗೆ ವೀಸಾ ಮಾಡಿಸಿ ಕೊಡುವಂತೆ ಕೇಳಿದ್ದು ಅದಕ್ಕೆ ಒಪ್ಪಿದ ಆರೋಪಿತರು ಪಿರಿಯಾದುದಾರರಿಂದ 24 ಲಕ್ಷ ಹಣವನ್ನು ಪಡೆದುಕೊಂಡು ವೀಸಾ ಮಾಡಿಸಿ ಕೊಟ್ಟಿರುವುದಿಲ್ಲ, ಈ ಬಗ್ಗೆ ಪಿರಿಯಾದರೂ ಆರೋಪಿತರನ್ನು ಕೇಳಲಾಗಿ ಎಮ್ ಬಿಸ್ಸಿಗೆ ಕಳುಹಿಸಿದಾಗ ತಿಳಿಸಿರುತ್ತಾರೆ.
ಆದ್ದರಿಂದ ಪಿರಿಯಾದುದಾರೋ ತಮಗೆ ಪರಿಚಯಸ್ಥರಾದ 33 ಜನರಿಂದ ಒಂದು ಕೋಟಿ ಎಪ್ಪತ್ತೆಂಟು ಲಕ್ಷದ 50 ಸಾವಿರ ರೂಪಾಯಿ ಹಾಗೂ ಪಿರಿಯಾಗುದದಾರರಿಗೆ ಪರಿಚಯ ಸ್ಥರಾದ ಮತ್ತೊಬ್ಬ ವ್ಯಕ್ತಿ ರೂ.15 ಜನರಿಂದ 84 ಲಕ್ಷ ಹಣವನ್ನು ಪಡೆದುಕೊಂಡು ಆರೋಪಿತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ಎರಡು ಕೋಟಿ 64ಲಕ್ಷದ 20000 ಹಣವನ್ನು ವರ್ಗಾವಣೆ ಮಾಡಿರುತ್ತಾನೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.