ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಮಹಾಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮಹದೇಶ್ವರರ ಭಕ್ತರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಫೆಬ್ರವರಿ ೯ ರಂದು ಅಧಿಕಾರ ವಹಿಸಿಕೊಂಡ ಇವರು ಪ್ರಮುಖ ೩ ಜಾತ್ರೆಗಳು, ಮಹಾಲಯ ಅಮಾವಾಸ್ಯೆ, ಶ್ರಾವಣ ಮಾಸ ಕುಂಭಾಭಿಷೇಕ ಮಹಾನವಮಿ ಆಯುಧ ಪೂಜೆ ವಿಜಯದಶಮಿ ಜಾತ್ರಾ ಮಹೋತ್ಸವಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಶ್ರೀ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರಂಗಮAದಿರದಲ್ಲಿ ವಾಸ್ತವ್ಯ ಮಾಡುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೂಲಿಂಗ್ ಬಣ್ಣವನ್ನು ಬಳಿಸಿ ಅನುಕೂಲ ಕಲ್ಪಿಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದು ಬೇಸಿಗೆಯ ಸಂದರ್ಭದಲ್ಲಿ ಮಡಕೆಯಲ್ಲಿ ತಣ್ಣನೆಯ ಕುಡಿಯುವ ನೀರು ನೀಡಿದ್ದರು ಇದೀಗ ಟ್ಯಾಂಕ್ ಗಳ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಸುತ್ತಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಬಾಣಂತಿಯರು ಚಿಕ್ಕ ಮಕ್ಕಳಿಗೆ ಹಾಲುಣಿಸಲು ತೊಂದರೆ ಉಂಟಾಗುತ್ತಿತ್ತು ಈ ಹಿನ್ನೆಲೆ ದೇವಸ್ಥಾನದ ರಾಜಗೋಪುರದ ಸಮೀಪ ಹಾಲುಣಿಸುವ ಕೇಂದ್ರ ತೆರೆದು ಬಾಣಂತಿಯರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದುವರೆಗೂ ಆಡಳಿತ ನಡೆಸಿದ ಅಧಿಕಾರಿಗಳು ಮಾಡದ ಕೆಲಸವನ್ನು ಇವರು ಮಾಡಿದ್ದಾರೆ. ಭಕ್ತರು ಹಾಗೂ ಪ್ರಜ್ಞಾವಂತ ನಾಗರಿಕರು ಹಾಲುಣಿಸುವ ಕೇಂದ್ರದ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಯಕದಲ್ಲಿ ಕೈಲಾಸ ಕಂಡ ಕಾರ್ಯದರ್ಶಿ: ಕಳೆದ ವಾರ ನಡೆದ ದೀಪಾವಳಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಾಜಗೋಪುರ ಮುಂಭಾಗ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಇನ್ನಿತರ ಕಸ ಕಡ್ಡಿಗಳು ಬಿದ್ದಿದ್ದ ಇದನ್ನು ನೋಡಿದ ಕಾರ್ಯದರ್ಶಿಗಳು ಪೌರಕಾರ್ಮಿಕರನ್ನು ಕಾಯದೆ ತಾವೇ ರಾತ್ರಿ ೧೧:೦೦ ಯಿಂದ ಮೂರು ಗಂಟೆಯವರೆಗೆ ಕಸ ಒಡೆದು ಸ್ವಚ್ಛ ಮಾಡಿದ್ದಾರೆ.
ರಘು ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಕ್ಷೇತ್ರದಲ್ಲಿ ಒಂದಿಲ್ಲ ಒಂದು ಬದಲಾವಣೆಗಳು ಆಗುತ್ತಿದೆ. ಆದರೆ ಶ್ರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಬಹಳ ಸಮಸ್ಯೆಗಳು ಪರಿಹಾರ ಕಂಡಿಲ್ಲ, ಪ್ರತಿಯೊಂದು ಸಮಸ್ಯೆಗಳನ್ನು ಹಂತಹAತವಾಗಿ ಬಗೆಹರಿಸಲು ಸಚಿವರು, ಶಾಸಕರ ಜೊತೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಸಿ ಗಮನ ಸೆಳೆಯುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಶರವಣ ಪತ್ರಿಕೆಯೊಂದಿಗೆ ಮಾತನಾಡಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ರಘು ರವರು ಬಂದಿರುವುದು ನಾವೆಲ್ಲರೂ ಮಾಡಿರುವ ಪುಣ್ಯವೇ ಸರಿ ಶಿಸ್ತು ದಕ್ಷ ಸ್ವಚ್ಛತೆಗೆ ಹೆಚ್ಚು ಹೊತ್ತು ನೀಡಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿ ಪ್ರಾಧಿಕಾರದ ಹೆಸರು ಹಾಗೂ ಮಲೆ ಮಹದೇಶ್ವರ ಮಹಿಮೆಯನ್ನು ಉತ್ತುಂಗಕ್ಕೆ ಏರಿಸಲು ಸತತ ಪರಿಶ್ರಮ ಪಡುತ್ತಿದ್ದಾರೆ ಇವರ ಸೇವಾ ಕಾರ್ಯ ಹೀಗೆ ಮುಂದುವರೆಯಲಿ, ಇದೇ ನಿಟ್ಟಿನಲ್ಲಿ ಮೂಡಲ ಮಲೆ ವಾಣಿಜ್ಯ ಸಂಕೀರ್ಣದ ಮಳಿಗೆದಾರರು ೨೦೧೬ ರಿಂದ ೨೦೨೪ರ ವರೆಗೆ ಕಳೆದು ೮ ವರ್ಷಗಳಿಂದ ಕೇಸ್ ಎಂಬ ಮುಖವಾಡ ಧರಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ವ್ಯಾಪಾರ ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಅವರಿಗೆ ಅಂಗಡಿಗಳನ್ನು ಇಡಲು ಯಾವುದೇ ಅನುಮತಿ ನೀಡಿಲ್ಲ ಆದರೆ ಮಳಿಗೆದಾರರು ಇವರಿಗೆ ಮನಬಂದAತೆ ಸಾಮಗ್ರಿಗಳನ್ನು ಜೋಡಿಸಿಕೊಂಡು ದರ್ಪದಿಂದ ವ್ಯಾಪಾರ ಮಾಡುತ್ತಾ ಪ್ರಾಧಿಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.