ಜಾನಪದ ಆಲೌಕಿಕ ಸಂವಿಧಾನ ಎಂದಿಗೂ ನಶಿಸುವುದಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ತಿಳಿಸಿದರು.
ಮಹಾಲಕ್ಷ್ಮಿ ಬಡಾವಣೆಯ ಬಿಬಿಎಂಪಿ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಸಾಹಿತ್ಯಕ್ಕೂ ಮೂಲ ಜಾನಪದ, ಇದಕ್ಕೆ ಯಾವುದೇ ಚೌಕಟ್ಟಿಲ್ಲ ಇತಿಮಿತಿಯಿಲ್ಲ, ಇದು ಎಂದಿಗೂ ನಶಿಸಲು ಸಾಧ್ಯವಿಲ್ಲ, ಪರಿವರ್ತನೆಗೊಳ್ಳುತ್ತಾ ನಮ್ಮೊಂದಿಗೆ ಸದಾ ಇರುತ್ತದೆ, ಶಾಲಾ ಕಾಲೇಜು ಪಠ್ಯಪುಸ್ತಕಗಳಲ್ಲಿ ಜನಪದದ ಪದ್ಯ ಗದ್ಯಗಳನ್ನು ಹೆಚ್ಚಾಗಿ ಅಳವಡಿಸಬೇಕೆಂದು ಅವರು ತಿಳಿಸಿದರು.
ನಾಡೋಜ ಶ್ರೀ ಷಡಕ್ಷರಿ ಅವರು ಮಾತನಾಡುತ್ತಾ ಜಾನಪದ ಗ್ರಾಮೀಣ ಭಾಗದ ಜೊತೆಗೆ ನಗರದಲ್ಲಿಯೂ ಸಹ ಕನ್ನಡ ಜಾನಪದ ಪರಿಷತ್ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನಿಯ ಎಂದರು.
ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಡಾ ರಿಯಾಜ್ ಪಾಷ ಅವರು ಮಾತನಾಡುತ್ತಾ ದಾಖಲೀಕರಣ ಮತ್ತು ತರಬೇತಿಯ ಮೂಲಕ ಕನ್ನಡ ಜಾನಪದ ಪರಿಷತ್ ನಗರ ಪ್ರದೇಶಗಳಲ್ಲಿ ಹಾಗೂ ಎಲ್ಲಾ ವಿಧಾನಸಭಾ ಕ್ಷೇತ್ರ ಘಟಕಗಳಲ್ಲಿ ಹೊಸ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಮಹಿಳೆಯರು ಯುವಜನರು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಶಾಲಾ ಹಂತಗಳಲ್ಲಿ ಜಾನಪದ ವಿಕಾಸಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಜನಪದ ಗಾಯಕರುಗಳಾದ ಶ್ರೀ ಕಡಬಗೆರೆ ಮುನಿರಾಜು ಶ್ರೀಮತಿ ಸವಿತಾ ಶ್ರೀ ಕುಣಿಗಲ್ ರಾಮಚಂದ್ರ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.