ಬೆಂಗಳೂರು: ಜಾನಪದ ಒಂದು ಅಲೌಕಿಕ ಸಂವಿಧಾನ ಇದನ್ನು ಉಳಿಸಿ ಬೆಳೆಸಿ ಬಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಯುವಕರಿಗೆ ಕರೆ ನೀಡಿದರು.ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ ಕನ್ನಡ ಜಾನಪದ ಪರಿಷತ್ ಬ್ಯಾಟರಾಯನಪುರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಘಟಕ ಉದ್ಘಾಟಿಸಿ ಮಾತನಾಡಿದರು.
ಜಾನಪದಕ್ಕೆ ಚೌಕಟ್ಟಿಲ್ಲ ಇತಿಮಿತಿ ಇಲ್ಲ ಇದು ಎಂದೂ ಸಾಯಲು ಒಪ್ಪುವುದಿಲ್ಲ, ರುಪಾಂತರಗೊಂಡು ಎಂದಿಗೂ ಜೀವಂತವಾಗಿರುತ್ತದೆ, ಇದು ಅವಿನಾಶಿ, ವಿದ್ಯಾರ್ಥಿಗಳು ಮತ್ತು ಯುವಜನರು ಜಾನಪದ ಜಾಗೃತಿ ಮೂಡಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ತಿಳಿಸಿದರು. ಬೆಂಗಳೂರು ಕೇಂದ್ರ ಜಿಲ್ಲೆಯ ಜಿಲ್ಲಾಧ್ಯಕ್ಷ ಡಾ ರಿಯಾಜ್ ಪಾಷ ಮಾತನಾಡಿ ಜಾನಪದ ಎಲ್ಲಾ ಧರ್ಮಗಳು ಮತ್ತು ಭಾಷೆಯಲ್ಲಿ ಅಡಗಿದೆ, ಧಾರ್ಮಿಕ ಹಾಗೂ ಭಾಷಾ ಜಾನಪದದ ಬಗ್ಗೆಮುಂದಿನ ದಿನಗಳಲ್ಲಿ ಹೆಚ್ಚು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವ ಮೂಲಕ ರಾಷ್ಟ್ರೀಯ ಸಂಸ್ಕೃತಿಕ ಭಾವೈಕ್ಯತೆ ಮೂಡಿಸಲಾಗುವುದು ಎಂದರು.
ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ಕು ಸಾಧಕರಿಗೆ ಅಭಿನಂದಿಸಿ ಗೌರವಿಸಲಾಯಿತು.ಬ್ಯಾಟರಾಯನಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಕೆಂಪೇಗೌಡ, ಸಹಾಯಕ ಪ್ರಾಧ್ಯಾಪಕ ಪ್ರೊ ಶ್ರೀನಿವಾಸ್, ಮುಖ್ಯ ಶಿಕ್ಷಕ ರವಿ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊ ಅಂಬಿಕಾ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಗೌರವಾಧ್ಯಕ್ಷ ಆನಂದ್, ಅಧ್ಯಕ್ಷ ಮಹೇಂದ್ರ ಜಾದವ್, ಕಾರ್ಯದರ್ಶಿ ಗಣಪತಿ ಗೌಡ ಹಾಗೂ ನೂರಾರು ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.