ಹರಾರೆ: ಪ್ರವಾಸಿ ಭಾರತದೆದುರಿನ 5 ಪಂದ್ಯಗಳ ಟಿ20 ಸರಣಿಗೆ ಜಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಬ್ಯಾಟರ್ ಸಿಕಂದರ್ ರಝ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬಹುತೇಕ ಯುವ ಆಟಗಾರರೇ ತಂಡದಲ್ಲಿ ತುಂಬಿದ್ದಾರೆ.
ಬೆಲ್ಜಿಯಂನಲ್ಲಿ ಜನಿಸಿದ ಅಂತುಮ್ ನಖ್ವಿ ಈ ತಂಡದ ನೂತನ ಆಟಗಾರ.ಆದರೆ ಅವರ ಪೌರತ್ವ ಸಾಬೀತಾಗಬೇಕಾದ ಅಗತ್ಯ ಇದೆ ಎಂಬುದಾಗಿ `ಜಿಂಬಾಬ್ವೆ ಕ್ರಿಕೆಟ್’ ತಿಳಿಸಿದೆ.ಜಸ್ಟಿನ್ ಸ್ಯಾಮ್ಸನ್ ತಂಡದ ನೂತನ ಕೋಚ್ ಆಗಿದ್ದಾರೆ.
38 ವರ್ಷದ ಸಿಕಂದರ್ ರಝ ಜಿಂಬಾಬ್ವೆಯ ಅತ್ಯಂತ ಅನುಭವಿ ಕ್ರಿಕೆಟಿಗನಾಗಿದ್ದು, 86 ಪಂದ್ಯಗಳನ್ನಾಡಿದ್ದಾರೆ. ಆದರೆ ಮತ್ತಿಬ್ಬರು ಹಿರಿಯ ಆಟಗಾರರಾದ ಕ್ರೆಗ್ ಇರ್ವಿನ್ ಮತ್ತು ಸೀನ್ ವಿಲಿಯಮ್ಸ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ರಿಯಾನ್ ಬರ್ಲ್, ಜಾಯ್ಲಾರ್ಡ್ ಗುಂಬಿ, ಐನ್ಸ್ಲಿ ಎಂಡ್ಲೋವು ಕೂಡ ಆಯ್ಕೆಯಾಗಿಲ್ಲ.