ದೇವನಹಳ್ಳಿ: ಮಾದಿಗ ಸಂಘಟನೆಗಳ ಒಕ್ಕೂಟದಿಂದ ಒಳ ಮೀಸಲಾತಿ ಜಿಲ್ಲಾಡಳಿತ ಭವನದ ಮುಂದೆ ಭೃಹತ್ ಹೋರಾಟ ನಡೆಸಿ ರಾಜ್ಯ ಸಕಾರಕ್ಕೆ ಹಾಗೂ ರಾಜ್ಯಪಾಲರಿಗೆ ತುಪಿಸುವಂತೆ ಕೋರಿ ಮನವಿ ನೀಡಲಾಯಿತು.
ಒಳ ಮೀಸಲಾತಿಯನ್ನು ಆಯಾ ರಾಜ್ಯಗಳು ಅನುಷ್ಠಾನ ಮಾಡಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿ ಬೆಂ.ಗ್ರಾ ಜಿಲ್ಲಾ ಆಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಮಾದಿಗ ದಂಡೋರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.
ಮಾದಿಗ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ “ಒಳ ಮೀಸಲಾತಿ ಜಾರಿ”ಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಆಗಮಿಸಿದ್ದ 2ಸಾವಿರಕ್ಕೂ ಹೆಚ್ಚು ಜನ ಮಳೆಯನ್ನು ಲೆಕ್ಕಿಸದೇ ಪಾಲ್ಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ ಬುಳ್ಳಹಳ್ಳಿ ರಾಜಪ್ಪ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಂದಿದ್ದು ಅಸ್ಪøಷ್ಯ ಮಾದಿಗ ಹಾಗೂ ಹೊಲೆಯ ಸಮುದಾಯಕ್ಕೆ ಆದರೆ ತದನಂತರದಲ್ಲಿ ಸಣ್ಣ ಪುಟ್ಟ ಜಾತಿಗಳನ್ನು ಪರಿಶಿಷ್ಠ ಜಾತಿಯ ಮೀಸಲಾತಿಯಲ್ಲಿ ಸೇರಿಸಲಾಗಿದೆ ಆದನ್ನುವಿರೋದಿಸಿ ಜನಸಂಖ್ಯೆ ಆದಾರದಲ್ಲಿ ಒಳ ಮೀಸಲಾತಿಯ ಅನುಷ್ಠಾನಕ್ಕಾಗಿ ಕಳೆದ 30 ವರ್ಷಗಳಿಂದ ನಿರಂತರ ಹೋರಾಟಗಳ ಮುಖಾಂತರ ಕೋರ್ಟ್ ಮೆಟ್ಟಿಲೇರಲಾಗಿದ್ದು ಸುಪ್ರೀಂ ಸಹ ಆಯಾ ರಾಜ್ಯಗಳುಒಳ ಮೀಸಲಾತಿಯನ್ನು ಜಾರಿಗೊಳಿಸಲು ಆಜ್ಞಾಪಿಸಿದೆ,
ಇಷ್ಟಾದರೂ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯಮನೀಭಾವನೆ ತಾಳುತ್ತಿರುವುದು ಏಕೆ ಒಳ ಮೀಸಲಾತಿಜಾರಿಗೊಳಿಸದೇ ಇದ್ದರೇ, ಸುಪ್ರೀಂ ಕೋರ್ಟ್ನ ಆದೇಶ ಪಾಲನೆ ನಿಂದನೆಗೆ ಗುರಿಯಾಗಲಿದ್ದೀರಿ ಅದಕ್ಕೆ ಸರ್ಕಾರವೇ ನೇರ ಹೊಣೆ’ ಎಂದರು.ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.ಮಾರಪ್ಪ ಮಾತನಾಡಿ ಪ್ರೊಪೆಸರ್ ಕೃಷ್ಣಪ್ಪನವರ ಹೋರಾಟದಿಂದ ನಾವು ಬಹಳಷ್ಠು ತಿಳಿದು ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಬೇಕಿದೆ, ರಾಜ್ಯದಲ್ಲಿ 1ಕೋಟಿಗೂ ಅಧಿಕ ಜನಸಂಖ್ಯೆ ಇರುವ ಮಾದಿಗರಿಗೆ ಹೆಚ್ಚು ಮೀಸಲಾತಿ ನೀಡಬೇಕು ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಎನ್, ಶಿವಶಂಕರ್ ಮಾತನಾಡಿ ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿಗೆ ಆಗಸ್ಟ್ನಲ್ಲಿ ನೀಡಿರುವ ತೀರ್ಪಿಗೆ ತಮ್ಮ ಸಂಘಟನೆಗಳ ಒಕ್ಕೂಟದ ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ, ರಾಜ್ಯದ ಕಾಂಗ್ರೆಸ್ ಸರ್ಕಾರ 36ಸಾವಿರ ಬ್ಯಾಕ್ಲಾಗ್ ಉದ್ಯೋಗ ತುಂಲು ಉದ್ದೇಶಿಸಿದೆ ಆದರೆ ಒಳಮೀಸಲಾತಿ ಜಾರಿಯಾಗದ ಹೊರೆತು ಅದನ್ನು ತುಂಬಬಾರದು ಎಂದುದು ತಮ್ಮ ವಿಚಾರ ಇದನ್ನು ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯ ಪಾಲರಿಗೆ ರವಾನಿಸಲಾಗುವುದು ಎಂದರು.
ಇದೇ ವೇಳೆ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್, ತಾಲ್ಲೂಕು ಉಪಾಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ಮುನಿರಾಜು, ದೇವನಹಳ್ಳಿ ಡಾ|| ಎಂ. ಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ದೇವರಾಜ್, ಖಜಾಂಜಿ ಸಾವಕನಹಳ್ಳಿ ಶ್ರೀನಿವಾಸ್, ಹ್ಯಾಡಾಳ ದೇವರಾಜು, ನಾರಾಯಣಸ್ವಾಮಿ ಬೇಚಾಪುರ ವೇಣುಗೋಪಾಲ್ ಸೇರಿದಂತೆ ಇತರರು ಇದ್ದರು.