ತಿ. ನರಸೀಪುರ: ಹಾವೇರಿ ಮೂಲದ ರೈತ ಕುಟುಂಬವನ್ನು ಜಿಟಿ ಮಾಲ್ ನವರು ತಡೆದು ಅಮಾನೀಯವಾಗಿ ನಡೆಸಿಕೊಂಡು ಮಾಡಿದ ಅಪಮಾನ ಇಡಿ ದೇಶದ ರೈತರಿಗೆ ಮಾಡಿದ ಅಪಮಾನ ಎಂದು ರೈತ ಮುಖಂಡ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತನಿಗೆ ಅವಮಾನಮಾಡಿದ ಜಿಟಿ ಮಾಲ್ ನಡೆ ಕುರಿತು ಮಾತನಾಡಿದ ಅವರು ಪಂಚೆ ನಮ್ಮ ದೇಶದ ಸಂಸ್ಕೃತಿ. ನಮ್ಮ ಪ್ರತಿಯೊಂದು ಶುಭ ಕಾರ್ಯಕ್ರಮದಲ್ಲಿ ಪಂಚೆ ಧರಿಸಿಯೇ ಪೂಜೆ ಸಲ್ಲಿಸುತ್ತೇವೆ. ರೈತರು ಬೆಳೆದ ತರಕಾರಿಗಳನ್ನೇ ಮಾಲ್ ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರು ಕಷ್ಟ ಪಟ್ಟು ಜಮೀನಿನಲ್ಲಿ ದುಡಿದರೆ ಮಾತ್ರ ಮಾಲ್ ನಲ್ಲಿ ತರಕಾರಿ, ದಿನಸಿ ಮಾರಲು ಸಾಧ್ಯ.
ಈ ಹಿಂದೆಯೂ ಮೆಟ್ರೋ ದಲ್ಲಿ ರೈತನಿಗೆ ಅಪಮಾನ ಮಾಡಲಾಗಿತ್ತು.ಈಗ ಮಾಲ್ ನಲ್ಲಿ ಅಪಮಾನ ಮಾಡಲಾಗಿದೆ. ಇಂಥ ಕೃತ್ಯಗಳು ಮುಂದೆ ನಡೆಯಬಾರದು. ಕೂಡಲೇ ರಾಜ್ಯ ಸರ್ಕಾರ ಮಾಲ್ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು.ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲ ರಾಜ್ಯದ್ಯಂತ ರೈತರು ಪ್ರತಿಭಟನೆ ಮಾಡುತ್ತೇವೆ ರೈತ ಮುಖಂಡ ಬನ್ನೂರು ನಾರಾಯಣ್ ಹೇಳಿದರು.