ಲಂಡನ್: ಒಂದೂವರೆ ಶತಮಾನ ದಷ್ಟು ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಉಡಾಯಿಸಿದ ವಿಶ್ವದ ಏಕೈಕ ವೇಗದ ಬೌಲರ್ ಎಂಬ ಖ್ಯಾತಿಯ ಜೇಮ್ಸ್ ಅಂಡ್ರಸನ್ ಅವರಿಗೆ ಇಂಗ್ಲೆಂಡ್ ತಂಡ ಗೆಲುವಿನ ವಿದಾಯ ಸಲ್ಲಿಸಿದೆ.
ವೆಸ್ಟ್ ಇಂಡೀಸ್ ಎದುರಿನ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 114 ರನ್ನುಗಳಿಂದ ಜಯಿಸಿದೆ.ಆದರೆ ಗೆಲುವಿನ ಸಂಭ್ರಮಕ್ಕಿಂತ ಜೇಮ್ಸ್ ಅಂಡ್ರಸನ್ ಅವರ ವಿದಾಯ ತಂಡವನ್ನು ಹೆಚ್ಚು ಕಾಡಿದೆ.
250ರನ್ನುಗಳ ಭಾರೀ ಹಿನ್ನಡೆ ಸಿಲುಕಿದ ವೆಸ್ಟ್ ಇಂಡೀಸ್, ದ್ವಿತೀಯ ಇನ್ನಿಂ ಗ್ಸ್ನಲ್ಲಿ ಮತ್ತೆ ಬ್ಯಾಟಿಂಗ್ ಕುಸಿತಕ್ಕೊಳಗಾಗಿ 136 ರನ್ನುಗಳಿಗೆ ಆಲೌಟ್ ಆಯಿತು. ಇದರಲ್ಲಿ 3 ವಿಕೆಟ್ಗಳನ್ನು ಜೇಮ್ಸ್ ಅಂಡ್ರಸನ್ 32 ರನ್ ವೆಚ್ಚದಲ್ಲಿ ತಮ್ಮದಾಗಿಸಿಕೊಂಡರು. ಇದರೊಂದಿಗೆ ಅವರ ವಿಕೆಟ್ ಗಳಿಕೆ 704ಕ್ಕೆ ಏರಿತು. ಅಂದರೆ ಶೇನ್ ವಾರ್ನ್ ಗಳಿಕೆಗಿಂತ ಕೇವಲ 4 ವಿಕೆಟ್ ಕಡಿಮೆ.