ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಯಲುಸೀಮೆ ಪ್ರದೇಶದ ರೈತರ ಜಮೀನಿಗೆ ಕುಡಿಯುವ ನೀರು ಹರಿಸಬೇಕೆಂದು ಅನೇಕ ವರ್ಷಗಳಿಂದಲೂ ನೀರಾವರಿ ಹೋರಾಟ ಸಮಿತಿ ಹೋರಾಟ ಮಾಡುತ್ತಲೆ ಬಂದಿದೆ, ಮೊದಲಿಗೆ ದಿ|| ಜಿ.ವಿ. ಶ್ರೀರಾಮರೆಡ್ಡಿ ಅಧ್ಯಕ್ಷ
ರಾಗಿದ್ದರು ಅವರ ನಿಧನಾ ನಂತರ ಆಂಜನೇಯರೆಡ್ಡಿ ಈಗ ಪ್ರಸ್ತುತ ಅಧ್ಯಕ್ಷರಾಗಿ ಸುಮಾರು ವರ್ಷಗಳ ನಂತರ ಶಾಶ್ವತ ನೀರಾವರಿ ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ, ಇದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ರೈತ ಮುಖಂಡರು, ದಲಿತಪರ ಮುಖಂಡರು ಕೈಜೋಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಸಕರು ಮತ್ತು ಸಚಿವರನ್ನು ಬೇಟಿ ಮಾಡಿ ಅಧೀವೇಶನದಲ್ಲಿ ಶಾಶ್ವತ ನೀರಾವರಿಗಾಗಿ ಪ್ರಸ್ತಾಪಿಸುವಂತೆ ತಿಳಿಸಲಾಗಿತ್ತು ಆದರೂ ನಮ್ಮ ಸಚಿವರಾಗಲಿ, ಮೂರು ತಾಲೂಕಿನ ಶಾಸಕರಾಗಲಿ ಚಕಾರ ಎತ್ತದೇ ಇರುವುದು ನೋಡಿದರೆ ಇವರಿಗೆ ರೈತರ ಮೇಲೆ ಕಿಂಚಿತ್ತು ಕರುಣೆಯಿಲ್ಲ, ಈಗಲಾದರೂ ಮೌನ ಮುರಿದುಶಾಸಕರು ನೀರಾವರಿಗಾಗಿ ಸದನದಲ್ಲಿ ಮಾತನಾಡಿ ಧ್ವನಿ ಎತ್ತಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯರೆಡ್ಡಿ ಒತ್ತಾಯಿಸಿದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಬಳಿಯ ಜಿಲ್ಲಾಡಳಿತ ಭವನದ ಎದುರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಹೋರಾಟವನ್ನು ಕಡೆಗಣಿಸುತ್ತಿರುವ ಶಾಸಕರ ಧೋರಣೆಯನ್ನು ಖಂಡಿಸಿ ಮತ್ತು ಅಧಿವೇಶನದಲ್ಲಿ ಮೌನ ಮುರಿದು ಮಾತನಾಡಲು ದೈರ್ಯವಿಲ್ಲದ ಶಾಸಕರು,
ಎತ್ತಿನ ಹೊಳೆ ಯೋಜನೆಯ ಅನುಷ್ಠಾನಮಾಡಿದರೂ ನೀರು ಇಲ್ಲ ಎಂದು ಜಲಮೂಲದವೈಜ್ಞಾನಿಕ ತಂಡ ಹೇಳಿದರೂ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ, 10ವರ್ಷ ಗಳ ಹಿಂದೆ ಸಂಸದರಾಗಿದ್ದ ವೀರಪ್ಪ ಮೊಯಿಲಿಬರಿ ಆಶ್ವಾಸನೆ ನೀಡುತ್ತಲೇ ಕಾಲ ಕಳೆದುಬಿಟ್ಟರು, ಸರ್ಕಾರಗಳು ರೈತರ ಖೃಷಿ ಭೂಮಿಯನ್ನು ಕಿತ್ತುಕೋಂಡು ಹೊಗೆ ಹುಗುಳು ಕೈಗಾರಿಕೆಗಳತ್ತ ಒಲವು ತೋರಿದ್ದಾರೆ, ರೈತರ ಕೃಷಿ ಭೂಮಿಗೆ ಅವಶ್ಯಕವಾದ ನೀರಿಗಾಗಲಿ, ಜನರಿಗೆ ಕುಡಿಯುವ ನೀರಿಗಾಗಲಿ ಯಾವುದೇ ಆಸಕ್ತಿ ಇಲ್ಲ, ಎತ್ತಿನ ಹೊಳೆ ಬರಿ ಕನಸಿನ ಕೂಸಾಗಿಯೇ ಇದೆ ಎಂದರು.
ಸಾಮಾಜಿಕ ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಸರ್ಕಾರದ ಹಲವಾರು ನೀರಾವರಿ ಯೋಜನೆಗಳಿಂದ ಕುಡಿಯುವ ನೀರು ವಿಷವಾಗುತ್ತಿದೆ, ಕೃಷಿಗೂ ಸಹ ಯೋಗ್ಯವಲ್ಲದ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಬಿಡುತ್ತಿರುವುದು ನೀರಾವರಿಯ ಯೋಜನೆಯ ವೈಫಲ್ಯ ತೋರಿಸುತ್ತಿದೆ, ಜ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಿದ್ದಾರೆ ಆದರೆ ಅಲ್ಲಿನ ಜನರು ಸಂಕ್ರಾಮಿಕ, ಚರ್ಮ ರೋಗಗಳಿಂದ ಬಳಲುತ್ತಿದ್ದಾರೆ,
ಸಾರ್ವಜನಿಕರ ಸಾವಿರಾರು ಕೋಟಿ ತೆರಿಗೆ ಹಣ ಕೆಲಸಕ್ಕೆ ಬಾರದ ವಿಷಯಗಳಿಗೆ ಖರ್ಚು ಮಾಡುತ್ತಿದೆ, ಸಂಸದರು ಸಚಿವರು ಮೂರು ತಾಲೂಕಿನ ಶಾಸಕರು ಸೇರಿ ನೀರಿನ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟು ಸರ್ಕಾರದ ಮೇಲೆ ಒತ್ತಡ ತರಬೇಕು ಎಂಬುದು ನಮ್ಮಲ್ಲರ ಒಕ್ಕರಲಿನ ಅಭಿಪ್ರಾಯ, ಪಕ್ಕದ ರಾಜ್ಯಗಳು ನಮ್ಮ ರಾಜ್ಯದ ನದಿಗಳ ನೀರಿನ ಪ್ರಯೋಜನ ಪಡೆಯುತ್ತಿದ್ದಾರೆ ಆದರೆ ತಾಯ್ನಾಡಿನ ಜನತೆಗೆ ಯಾಕೆ ನೀರು ಲಭ್ಯವಿಲ್ಲ, ಇದಕ್ಕೆಲ್ಲಾ ಕಾರಣ ಶಾಸಕರುಗಳ ನಿರಾಸಕ್ತಿ, ಬರಿ ಅಧಿಕಾರ ಬೇಕಷ್ಟೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರುಗಳಾದ ಕೋಲಾರ ಜಿ. ನಾರಾಯಣಸ್ವಾಮಿ, ನಲ್ಲೂರು ಹರೀಶ್, ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷಮಾರೇಗೌಡ, ಚನ್ನರಾಯಪಟ್ಟಣ ಭೂಸ್ವಾಧೀನವಿರೋಧಿ ಹೋರಾಟ ಸಮಿತಿಯ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮ ಣಪ್ಪ, ಗೌರಿಬಿದನೂರು ಸನತ್ಕುಮಾರ್, ರಾಜಣ್ಣಸೇರಿದಂತೆ ಪ್ರತಿಭಟನೆಯಲ್ಲಿ ರೈತಪರ, ಕನ್ನಡಪರ, ದಲಿತಪರ ಕಾರ್ಮಿಕಪರ ಮುಖಂಡರು ಭಾಗವಹಿಸಿದ್ದರು.