ದೊಡ್ಡಬಳ್ಳಾಪುರ: ತಾಲೂಕಲ್ಲಿ ಇರಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ಬೆಂಗಳೂರಿನ ಪಿಣ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಸೂಚನೆಗೂ ಕಿಮತ್ತು ನೀಡದ ಅಧಿಕಾರಿಗಳು ಕಚೇರಿ ಸ್ಥಳಾಂತರಕ್ಕೆ ಹಿಂಜರಿಯುತ್ತಿದ್ದಾರೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ದೂರಿದರು.
ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಸಹ ಅಧಿಕಾರಿಗಳು ನೆಪಗಳನ್ನು ಹೇಳುತ್ತಲೇ ಕಾಲಾಹರಣ ಮಾಡುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಮುಖಂಡ ವಸಂತ್ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮೂರು ಸೇರಿದಂತೆ ಈ ಭಾಗದ ಹತ್ತಾರು ಕೆರೆಗಳಿಗೆ ಮಳೆ ಬರುವ ಸಂದರ್ಭದಲ್ಲಿ ಕೈಗಾರಿಕೆಗಳು ರಾಸಾ- ಯನಿಕಯುಕ್ತ ನೀರನ್ನು ಚರಂಡಿಗಳ ಮೂಲಕ ಹರಿದು ಬಿಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ದೂರು ನೀಡಲು ಬೆಂಗಳೂರಿಗೆ ಹೋಗಬೇಕಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಒಂದೆರಡು ದಿನಗಳ ಬಳಿಕ ಪರಿಶೀಲನೆಗೆ ಬರುತ್ತಾರೆ. ಅಷ್ಟರಲ್ಲಿ ತ್ಯಾಜ್ಯ ನೀರು ಅಂತರ್ಜಲ ಸೇರುತ್ತಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ತಿಂಗಳಲ್ಲಿ ಒಂದು ದಿನವು ಸಹ ಬೀಟ್ ನಡೆಸುವ ಪದ್ದತಿಯೇ ಇಲ್ಲದಾಗಿದೆ ಎಂದರು.ಕೆರೆ ಒತ್ತುವರಿ ಕ್ರಮ ಕೈಗೊಳ್ಳದ ಆಡಳಿತ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಚಿಕ್ಕತುಮಕೂರು ಕೆರೆ ಅಂಚಿನ ಭಫರ್ ಜೋನ್ ಪ್ರದೇಶವನ್ನು ಬಿಡದೆ ಖಾಸಗಿ ಕಾರ್ಖಾನೆಯೊಂದು ತಡೆಗೋಡೆ ನಿರ್ಮಿಸಿಕೊಂಡಿದೆ.
ಅದೇ ಕಾರ್ಖಾನೆಯವರೇ ಈಗ ತಡೆಗೋಡೆಯನ್ನು ಕೆರೆ ಅಂಗಳದಲ್ಲಿ ಮಣ್ಣಿನ ದಿಬ್ಬ ನಿರ್ಮಿಸುವ ಮೂಲಕ ಕೆರೆಯನ್ನು ಹಂತ ಹಂತವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ಕೆರೆ ಒತ್ತುವ ರಿಯನ್ನು ಬಿಡಿಸುವ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮ ಜಾ ರ ಹೊ ಸ ಹ ಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನಗರಸಭೆಯ ಒಳಚರಂಡಿ ನೀರು ತುಂಬಿಕೊಂಡು ಅಂತರ್ಜಲ ಕಲುಷಿತಗೊಂಡಿದೆ.
ಸಂಪೂರ್ಣವಾಗಿ ಹಾಗಾಗಿ ಜಕ್ಕಲಮೊಡಗು ಜಲಾಶಯದಿಂದ ನಗರಸಭೆವ್ಯಾಪ್ತಿಗೆ ಬರುವ ನೀರನ್ನು ಎರಡೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಇರುವ ಕುಡಿಯುವ ನೀರನ್ನು ಟ್ಯಾಂಕರ್ಗಳ ಮೂಲಕ ನಗರಸಭೆ ಸರಬರಾಜು ಮಾಡುತಿತ್ತು. ಆದರೆ ನಾಲ್ಕು ದಿನಗಳಿಂದಲು ನೆಪ ಹೇಳುತ್ತಲೇ ಕಾಲ ಕಳೆಯ
ಲಾಗುತ್ತಿದೆಯೇ ವಿನಹ ನೀರು ಸರಬರಾಜು ಮಾಡುತ್ತಿಲ್ಲ ಎಂದು ಹೋರಾಟ ಸಮಿತಿ ಮುಖಂಡ ತಿಳಿಸಿದರು.
ಸಮಪರ್ಕವಾಗಿ ಕುಡಿಯುವ ನೀರು ಸರಬರಾಜು ಮಾಡದೇ ಇದ್ದರೆ ಜುಲೈ 22 ರಿಂದ ತಾಲ್ಲೂಕು ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಅವಿದ್ಯಾವಂತ ರೈತರು ಹಾಗೂ ಇತರೆ ಸ್ಥಳೀಯರು ರಸ್ತೆ ಬದಿ ಪೆಟ್ಟಿ ಅಂಗಡಿಗಳನ್ನು ಇಟ್ಟುಕೊಂಡು ಟೀ, ಕಾಫಿ ಮಾಡುತ್ತ ಜೀವನ ಸಾಗಿಸುತ್ತಿದ್ದಾ- ರೆ. ಆದರೆ ಕೈಗಾರಿಕೆಗಳವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಕೂಡಲೇ ಪೆಟ್ಟಿ ಅಂಗಡಿ ತೆರವುಗೊಳಿಸುವ ಬಡವರ ವಿರೋಧಿ ಕೃತ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಹೋರಾಟ ಮುಖಂಡರಾದ ಸಮಿತಿಯ ಸುರೇಶ್, ಕಾಳೇಗೌಡ, ರಮೇಶ್, ಮುನಿಕೃಷ್ಣಪ್ಪ, ವಿಜಯಕುಮಾರ್ ಇದ್ದರು.