ಬೆಂಗಳೂರು: ರಾಜ್ಯ ಕೋರ್ ಕಮಿಟಿ ಸಭೆ ನಂತರ ಪಕ್ಷದ ಎಲ್ಲಾ ನಾಯಕರು ಒಂದು ಕಡೆ ಸೆರಬೇಕಿತ್ತು. ಹಾಗಾಗಿ ಎಲ್ಲರೂ ಒಂದೆಡೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನಡೆದ ಪ್ರಮುಖರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅಶ್ವತ್ಥ್ನಾರಾಯಣ್, ಸಿ.ಟಿ.ರವಿ ಸೇರಿದ್ದೇವು ಎಂದು ಹೇಳಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ನಾವು ಮಾಡುವುದಿಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಶಿವರಾಜ್ ಸಿಂಗ್ ಚೌಹ್ಹಣ್ ಮಾಡುತ್ತಾರೆ. ಇದರ ಬಗ್ಗೆ ನಾವು ಮಾತನ್ನಾಡುವುದಿಲ್ಲ ಎಂದು ತಿಳಿಸಿದರು.
39 ಸಂಘಟನಾತ್ಮಕ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಆಗಬೇಕಿದೆ. ಹೀಗಾಗಿ, ಇಂದು ಆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವರದಿಯನ್ನು ಹೈಕಮಾಂಡ್ ನಾಯಕರುಗೆ ಕಳುಹಿಸಲಾಗುತ್ತದೆ. ಬಳಿಕ ಅಂತಿಮ ತೀರ್ಮಾನ ಅವರದ್ದು ಎಂದು ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಆರ್.ಅಶೋಕ್, ಇಂದು ನಾವು ಸಭೆ ಸೇರಿದ್ದೇವು. ಈಗಾಗಲೇ ಸದಾನಂದಗೌಡರ ನಿವಾಸದಲ್ಲಿ ಸಭೆ ಮುಗಿಸಿದ್ದೇವೆ. ರಾಮುಲು ಅವರ ಮನವೊಲಿಕೆ ಮಾಡಲಾಗುತ್ತದೆ. ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಸೇರಿದ್ದಾರೆ. ಎಲ್ಲವೂ ಬಗೆಹರಿಯಲಿದೆ. ರಾಮುಲು ಅವರ ಮನವೊಲಿಕೆ ಮಾಡುವುದು ಕೂಡ ಜವಾಬ್ದಾರಿ. ರಾಮುಲು ಅವರ ವಿಚಾರ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದಿದ್ದಾರೆ..
ರಾಮುಲು ಹಾಗೂ ಸಿ.ಟಿ.ರವಿಗೆ ರಾಧಾಮೋಹನ್ ದಾಸ್ ಅಗರ್ವಾಲ್ ಕ್ಲಾಸ್ ತೆಗೆದುಕೊಂಡ ವಿಚಾರವಾಗಿ ಮಾತನಾಡಿದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ನೀವೇನು ಕೋರ್ ಕಮಿಟಿ ಸಭೆಯಲ್ಲಿ ಇದ್ರಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.ಪಕ್ಷದೊಳಗೆ ಆಗುವ ಕೆಲ ಆಂತರಿಕ ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳಲು ಆಗುವುದಿಲ್ಲ. ಅಂತಹುದ್ದೇನು ನಡೆದಿಲ್ಲ. ರಾಮುಲು ಅವರಿಗೆ ಬೇಸರವಾಗಿದೆ. ಅದನ್ನು ಸರಿಪಡಿಸಲಾಗುತ್ತದೆ. ಕೋರ್ ಕಮಿಟಿ ಸಭೆಯಲ್ಲಿ ಯಾರಿಗೂ ವಾರ್ನಿಂಗ್ ಕೊಟ್ಟಿಲ್ಲ. ವಾರ್ನಿಂಗ್ ಎಂಬ ಶಬ್ದ ಬಳಕೆ ಮಾಡಬೇಡಿ ಎಂದರು.