ಬೇಲೂರು: ಪತ್ರಕರ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಎಲ್ಲ ಸದಸ್ಯರಿಗೂ ಅಪಘಾತ ವಿಮೆ ಮಾಡಿಸಿರುವುದು ಶ್ಲಾಘನೀಯವಾಗಿದೆ ಎಂದು ಬೇಲೂರು ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ ಹೆಳಿದರು.ಪಟ್ಟಣದ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಅಪಘಾತ ವಿಮೆ ಬಾಂಡ್ ವಿತರಿಸಿ ಮಾತನಡಿದ ಅವರು, ಪತ್ರಕರ್ತರು, ಪೊಲೀಸ್ನವರು, ವೈದ್ಯರು ಎಲ್ಲರ ಕಷ್ಟ ಸುಖಗಳಲ್ಲೂ ಬಾಗಿಯಾಗುತ್ತಾರೆ.
ಆದರೆ ತಮ್ಮ ಹಾಗೂ ತಮ್ಮ ಕುಟುಂಬದ ಕಷ್ಟ ಸುಖಗಳಲ್ಲಿ ಭಾಗವಹಿಸುವುದನ್ನು ಮರೆಯುತ್ತೇವೆ. ಜತೆಗೆ ಪತ್ರಕರ್ತರು ಸುದ್ದಿಗೇ ತರಾತುರಿಯಲ್ಲಿ ಹೋಗುತ್ತೇವೆ. ಈ ಸಂದರ್ಭ ಅಪಘಾತವಾಗಿರುವ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ. ನಾವು ಸರಿಯಾಗಿ ಹೋಗುತಿದ್ದರೂ ಎದುರಿನಿಂದ ಬಂದವರು ಅಪಘಾತ ಮಾಡಿದರೆ ಗಂಭೀರವಾಗಿ ಗಾಯಗೊಳ್ಳುತ್ತೇವೆ. ಆದರೆ ಎಲ್ಲ ಪತ್ರಕರ್ತರು ಆರ್ಥಿಕವಾಗಿ ಸಭಲರಾಗಿರುವುದಿಲ್ಲ. ಅಂತಹವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲಾ ಸಂಘದಿಂದ ಅಪಘಾತ ವಿಮೆ ಮಾಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಪತ್ರಕರ್ತರು ಸಹ ತಮ್ಮ ಜವಬ್ದಾರಿ ಅರಿತು ಸಮಾಜ ಮುಖಿಯಾಗಿ ಕೆಲಸ ಮಾಡುತ್ತ ಇತರರಿಗೆ ಮಾದರಿಯಾಗಬೇಕು ಎಂದರು.
ಹಿರಿಯ ಪತ್ರಕರ್ತರಾದ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲ. ಹೆಚ್ಚಿನ ಆಧಾಯವೂ ಇಲ್ಲ. ರಾಜ್ಯ ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಗೌರವ ಧನ ಸಿಗುತ್ತದೆ. ಲೋಕಲ್ ಪತ್ರಿಕೆಯವರಿಗೆ ಅದೂ ಸಿಗುವುದಿಲ್ಲ. ಆದರೂ ಗೌರವಕ್ಕಾಗಿ ಎಲ್ಲರೂ ಕೆಲಸ ಮಾಡುತಿದ್ದಾರೆ. ಬೇಲೂರು ಸಂಘವು ಹಿಂದಿನಿಂದಲೂ ರಾಜ್ಯಕ್ಕೆ ಮಾದರಿಯಾಗಿದೆ. ಮುಂದೆಯೂ ಸಂಘದ ಚಟಡುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ಜಿಲ್ಲಾ ಸಂಘದವರು ಎಲ್ಲ ಸದಸ್ಯರಿಗೂ ಅಪಗಾತ ವಿಮೆಯನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.
ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಪತ್ರಕರ್ತರಿಗೆ ಯಾವುದೇ ಭದ್ರತೆ ಮತ್ತು ಹೆಚ್ಚಿನ ಆಧಾಯಗಳಿಲ್ಲದಿರುವುದು ಎಲ್ಲರಿಗೂ ತಿಳಿದಿದೆ. ಪತ್ರಕರ್ತರದ್ದು ಸಮಾಜ ತಿದ್ದುವ ಕೆಲಸವಾದ್ದರಿಂದ ಅವರಿಗೆ ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಇಂತಹ ಸಂದರ್ಭ ಅನುಕೂಲವಾಗಲಿ ಎಂದು ಜಿಲ್ಲಾ ಸಂಘದಿಂದ ಅಪಘಾತ ವಿಮೆ ಮಾಡಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ಮೋಹನ್ ಕುಮಾರ್, ಹಿರಿಯ ಪತ್ರಕರ್ತ ಮಾ.ಶಿವಮೂರ್ತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಬಾರತೀಗೌಡ, ಪ್ರಧಾನ ಕಾರ್ಯದರ್ಶಿ ತಾರಾನಾಥ್, ಉಪಾಧ್ಯಕ್ಷ ಜಗಧೀಶ್, ನಿರ್ದೇಶಕರಾದ ಬಿ.ಎಲ್.ಲಕ್ಷ್ಮಣ್, ಮಲ್ಲೇಶ್, ರಮೇಶ್, ಎಂಜಿ.ನಿಂಗರಾಜು, ಆರಾಧ್ಯ, ಮಹೇಶ್ಗೌಡ. ಚಂದ್ರಶೇಖರ್, ಪತ್ರಕರ್ತ ಸಂತೋಷ್ ಇದ್ದರು.