ಬೆಂಗಳೂರು: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘ ರಾಜ್ಯ ಕಾರ್ಯ ಕಾರ್ಯಕಾರಣಿ ಸಭೆ ಇಂದು ಮಂಡ್ಯ ಜಿಲ್ಲೆಯ ಮಳವಳಿ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ಮಾತನಾಡಿ, ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳಿಗೆ ಶೇ.12 ರಷ್ಟು ದರ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟು ಕಳೆದು ಮೂರು ತಿಂಗಳಿನಿಂದಲೂ ವಾರ್ತಾ ಇಲಾಖೆ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಐದು ವರ್ಷ ಪೂರೈಸದ ಒಬಿಸಿ ಸಮುದಾಯದ ಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟ ಜಾಹೀರಾತು ನೀಡಬೇಕೆಂದು ಈಗಾಗಲೇ ಮನವಿ ಮಾಡಲಾಗಿದ್ದು, ಇಲಾಖೆಯಿಂದಾಗಲೀ, ಸರ್ಕಾರದಿಂದಾಗಲೀ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಅಂತಿಮವಾಗಿ ಹೋರಾಟದಿಂದ ನಮ್ಮ ಬೇಡಿಕೆಗಳನ್ಬು ಈಡೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಸಭೆಯಲ್ಲಿ ಎಲ್ಲಾ ಸಂಪಾದಕರ ಅಭಿಪ್ರಾಯದಂತೆ ಸೆ.30 ರಂದು ವಿಧಾನಸೌದಕ್ಕೆ ತೆರಳಿ ಹೋರಾಟ ನಡೆಸಲಾಗುವುದು. ಅದೇ ರೀತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಮುಂದೆ ಹೋರಾಟ ನಡೆಸಿ ನಮ್ಮ ಬೇಡಿಕೆ ಈಡೇರಿಸಲು ಒತ್ತಡ ತರೋಣ ಎಂದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ನಿಯಮದಂತೆ ಕೊಡಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಸಂಘವು ಮನವಿ ಮಾಡಲಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಸಂಘದ ಮನವಿಗೆ ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ಭೇಟಿಯಾಗಿ ನಮ್ಮ ಬೇಡಿಕೆಗಳ ಬಗ್ಗೆ ಕೇಳಿದಾಗ ಉದಾಸೀನ ತೋರುತ್ತಿದ್ದಾರೆ. ಆದ್ದರಿಂದ ಎಲ್ಲಾ ಸಂಪಾದಕರು ಒಗ್ಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘ ರಾಜ್ಯ ಉಪಾಧ್ಯಕ್ಷರಾದ ಪದ್ಮಾ ನಾಗರಾಜ ಅವರು ಮಾತನಾಡಿ, ಆಸಕ್ತಿ ಇದ್ದವರು ಸಂಘದ ಸದಸ್ಯತ್ವ ಪಡೆದುಕೊಳ್ಳಲಿ. ಆಯಾ ಜಿಲ್ಲಾ ಘಟಕಗಳಲ್ಲಿ ಜಿಲ್ಲಾಧ್ಯಕ್ಷರಿಗೆ ಜವಾಬ್ದಾರಿಯನ್ನು ಒಪ್ಪಿಸಬೇಕು. ಪ್ರತಿ ಸಲ ಇದೇ ವಿಷಯ ಸಭೆಯಲ್ಲಿ ಚರ್ಚಿಸುವುದು ಬೇಡ.
ಪ್ರಮುಖವಾಗಿ ಸಂಪಾದಕರ ಸಮಸ್ಯೆಗಳನ್ನು ಪರಿಹರಿಸುವತ್ತು ಗಮನ ಹರಿಸಬೇಕು. ಸಂಪಾದಕರಿಗೆ ಆರೋಗ್ಯ ಸೌಲಭ್ಯ ಹಾಗೂ ನಿವೇಶನಗಳನ್ನು ಸರ್ಕಾರದಿಂದ ಕೊಡಿಸುವಲ್ಲಿ ಸಂಘವು ಮುಂದಾಗಬೇಕು ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ ಅವರು ಮಾತನಾಡಿ, ಜನವರಿ 8 ರಂದು ಸಂಪಾದಕರ ಸಂಘವನ್ನು ರಚನೆ ಮಾಡಲಾಯಿತು. ಸಂಘ ರಚನೆಗಾಗಿ ಆರಂಭದಲ್ಲಿ ಕೇವಲ ನಾಲ್ಕು ಜನ ಶ್ರಮಿಸಿದ್ದು, ಸಂಘ ಇದೀಗ 155 ಸದಸ್ಯರನ್ನು ಹೊಂದಿದೆ. ಸಂಘ ರಚನೆಗೆ ಆರಂಭದಲ್ಲಿ ಶ್ರಮಿಸಿದವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಈಗಾಗಲೇ ಸಂಘದಿಂದ ಸೌಲಭ್ಯ ಪಡೆದುಕೊಂಡ ಸಂಪಾದಕರು ಸಂಘಕ್ಕೆ ಆರ್ಥಿಕ ಸಹಾಯ ಮಾಡಬೇಕೆಂದು ಮನವಿ ಮಾಡಿದರು.ರಾಜ್ಯ ಉಪಾಧ್ಯಕ್ಷರಾದ ಭೀಮರಾಯ ಹದ್ದಿನಾಳ ಅವರು ಅಜೆಂಡಾಗಳನ್ನು ಓದಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್ ಅವರು ಮಾತನಾಡಿ, ಐದು ವರ್ಷ ಪೂರೈಸದ ಒಬಿಸಿ ಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟ ಜಾಹೀರಾತು ನೀಡಬೇಕೆಂದು ಕಳೆದ ಎರಡು ತಿಂಗಳಿನಿಂದ ವಾರ್ತಾ ಇಲಾಖೆ ಆಯುಕ್ತರಿಗೆ, ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ. ಈವರೆಗೂ ಬೇಡಿಕೆ ಈಡೇರಿಲ್ಲ.
ಎಲದಲರಿಗೂ ಎರಡು ಪುಟ ಹಾಗೂ ಒಂದು ಪುಟ ಪ್ರತಿ ತಿಂಗಳು ಜಾಹೀರಾತು ನೀಡಲಾಗುತ್ತಿದೆ. ಆದರೆ ಮಾಧ್ಯಮ ಪಟ್ಟಿಯಲ್ಲಿದ್ದರೂ ಐದು ವರ್ಷ ಪೂರೈಸದ ಒಬಿಸಿ ಸಮುದಾಯದ ಪತ್ರಿಕೆಗಳಿಗೆ ಯಾವುದೇ ಪೆÇ್ರೀತ್ಸಾಹ ಜಾಹೀರಾತು ನೀಡಲಾಗುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬೇಕಾಗಿದೆ. ರಾಜ್ಯಾಧ್ಯಕ್ಚರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ದಿನಾಂಕ, ಸಮಯ ನಿಗಧಿಪಡಿಸಬೇಕೆಂದರು.
ರಾಜ್ಯ ಕಾರ್ಯದರ್ಶಿ ಅನುಪ್ ಕುಮಾರ ಮಾತನಾಡಿ, ಶೆ.12 ರಷ್ಟು ದರವನ್ನು ಹೆಚ್ಚಿಸುವ ಬೇಡಿಕೆ, ಪ್ರಾದೇಶಿಕ ಪತ್ರಿಕೆಗಳಿಗೆ ದರದಲ್ಲಿ ಹಾಕಿರುವ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದರು.ರಾಜ್ಯ ಉಪಾಧ್ಯಕ್ಷರಾದ ರಾಮಕೃಷ್ಣ, ಮಂಜುನಾಥ ಅಬ್ಬಿಗೆರೆ, ಸಂಘದ ಪದಾಧಿಕಾರಿಗಳಾದ ಕೃಷ್ಣಮೂರ್ತಿ ತುಮಕೂರು, ವೇದಮೂರ್ತಿ, ದಿನೇಶ ಗೌಡಗಿ, ನಾಗೇಶ ಗೌಡ ಸೇರಿದಂತೆ ಇನ್ನಿತರ ಸಂಪಾದಕರು ಅಭಿಪ್ರಾಯ ತಿಳಿಸಿದರು. ಮಂಡ್ಯ ಜಿಲ್ಲಾ ಪದಾಧಿಕಾರಿಗಳಾದ ಶಿವಶಂಕರ, ನಾಗೇಶ, ಮದನಗೌಡ, ಅಶೋಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಂಡ್ಯ ಜಿಲ್ಲಾ ಘಟಕದವರು ರಾಜ್ಯ ಕಾರ್ಯಕಾರಣಿ ಸಭೆಯನ್ನು ಅಚ್ಚುಕಟ್ಟಾಗಿ ಯಶಸ್ವಿ ಮಾಡಿದರು.