ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ , ಅಕ್ಟೋಬರ್ 9 ರಿಂದ 13 ರವರೆಗೆ 5 ದಿನಗಳ ಕಾಲ ‘ಲೈಫ್ ಬೈ ಡಿಸೈನ್, ನಾಟ್ ಬೈ ಡಿಫಾಲ್ಟ್’ ಎಂಬ ಜೀವನ ಕಲಿಕಾ ತರಬೇತಿ ಕಾರ್ಯಾಗಾರ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅದರಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 30ಕ್ಕೂ ಹೆಚ್ಚು ಮಂದಿಯಿದ್ದರು.
ಶ್ರೇಯನ್ ಡಾಗಾ ಮತ್ತು ವರುಣ್ ಡಾಗಾ ಅವರು ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ಯಶಸ್ವಿ ಉದ್ಯಮಿಗಳಾಗಿದ್ದ ಅವರಿಬ್ಬರು ಆಧ್ಯಾತ್ಮಿಕ ಬೋಧನೆಗಳು ಮತ್ತು ಪರಿವರ್ತನಾತ್ಮಕ ಕಾರ್ಯಾಗಾರಗಳನ್ನು ನಡೆಸಿಕೊಡುತ್ತಾರೆ. ಅಂತೆಯೇ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರಿಗೆ ಸ್ವಯಂ-ಅನ್ವೇಷಣೆ ಮತ್ತು ವೈಯಕ್ತಿಕ ಬೆಳವಣಿಗೆ ಮತ್ತು ಸಮೃದ್ಧ ಜೀವನದ ಬಗ್ಗೆ ತಿಳಿವಳಿಕೆ ನೀಡಿದರು.
ಶ್ರೇಯನ್ ಡಾಗಾ ಫೌಂಡೇಶನ್ನ ಸಂಸ್ಥಾಪಕ ಮತ್ತು ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಅಧ್ಯಕ್ಷ ಶ್ರೀ ಶ್ರೇಯನ್ ಡಾಗಾ ಮಾತನಾಡಿ ಅನೇಕರು ತಮ್ಮ ಜೀವನದಲ್ಲಿ ಶಾಶ್ವತ ಪರಿವರ್ತನೆ ಬಯಸಿರುವುದನ್ನು ನೋಡುವುದೇ ಪ್ರೇರಣಾದಾಯಕ. ಪ್ರತಿಯೊಬ್ಬರೂ ಸಂತೋಷ ಮತ್ತು ಸಾರ್ಥಕತೆಯ ಜೀವನ ನಡೆಸಲು ಪೂರಕವಾಗಿರುವಂತೆ ಈ ಕಾರ್ಯಾಗಾರವನ್ನು ರಚಿಸಲಾಗಿದೆ. ಅವರೆಲ್ಲರ ಈ ವೈಯಕ್ತಿಕ ಪರಿವರ್ತನೆಯ ಪ್ರಯಾಣಕ್ಕೆ ಪ್ರೇರಣೆ ನೀಡಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಹಲವಾರು ಕಾರ್ಯಾಗಾರಗಳು ಮತ್ತು ತರಗತಿಗಳನ್ನು ‘ ಧ್ಯಾನ, ಪರಿವರ್ತನೆ ಹಾಗೂ ಕ್ಷೇಮ’ ಎಂಬ ತತ್ವದ ಮೇಲೆ ಆಯೋಜಿಸುತ್ತಿದೆ. ಶ್ರೇಯನ್ ಅವರ ಮತ್ತೊಂದು ಜೀವನ ಕಲಿಕಾ ಕಾರ್ಯಾಗಾರವು ನವೆಂಬರ್ 28 ರಂದು ಪ್ರಾರಂಭವಾಗಲಿದೆ. ಅದು ನಾಲ್ಕು ದಿನಗಳವರೆಗೆ ನಡೆಯುತ್ತದೆ. ಭಾಗವಹಿಸಲು ಆಸಕ್ತಿ ಇರುವವರು ಸಂಪರ್ಕಿಸಬಹುದು.