ಮನರಂಜನೆಗೆ ಮತ್ತೊಂದು ಹೆಸರೇ ಜೀ ಕನ್ನಡ. ಜನಪ್ರಿಯ ಧಾರಾವಾಹಿಗಳು, ನಾನ್ ಫಿಕ್ಷನ್ ಶೋ ಗಳಿಂದ ವೀಕ್ಷಕರ ಪ್ರೀತಿಗೆ ಪಾತ್ರವಾಗಿರುವ ಜೀ ಕನ್ನಡ ಇದೀಗ `ಜೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025’ರ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ‘ಜೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025’ರಲ್ಲಿ ಚಂದನವನದ ಹಾಸ್ಯ ಕಲಾವಿದರ ಸಮಾಗಮವಾಗಲಿದೆ.
ಈ ವೇದಿಕೆಯಲ್ಲಿ ಕಣ್ಮರೆಯಾದ ಹಾಸ್ಯ ದಿಗ್ಗಜರ ಸ್ಮರಣೆ ಜೊತೆಗೆ ನಕ್ಕು ನಗಿಸುವ ಕಚೇರಿಯು ಇರಲಿದೆ. ಸ್ಯಾಂಡಲ್ವುಡ್ ನ ನಟರಾದ ಸಾಧು ಕೋಕಿಲ, ಪ್ರಾಣೇಶ್, ತರುಣ್ ಸುಧೀರ್, ಲೂಸ್ ಮಾಡ ಯೋಗಿ, ದಿಗಂತ್, ಮಾಳವಿಕಾ, ಸೋನು ಗೌಡ, ರಿಷಿ ಸೇರಿ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9:30 ರಿಂದ 11:30ರವರೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಜೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025’ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.