ಕೆ ಆರ್ ನಗರ: ಇದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮವಾಗಿದ್ದು ಪ್ರತಿ ವರ್ಷ ಜುಲೈ ೨೫ ನೇ ತಾರೀಖು ಐವಿಎಫ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾ. ಡಿ ನಟರಾಜ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ವಿಶ್ವ ಐ ವಿ ಎಫ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದೇ ದಿನ ೧೯೭೮ ರಲ್ಲಿ ವಿಶ್ವದ ಮೊಟ್ಟ ಮೊದಲ ಟೆಸ್ಟ್ ಟ್ಯೂಬಿ ಭೇಬಿ ಲೂಯಿಸ್ ಜ್ಯೂಲಿಯನ್ ನ, ಜನ್ಮದಿನವಾಗಿದೆ. ಇದಕ್ಕೆ ಕಾರಣಕರ್ತರು, ಡಾ: ರಾಬರ್ಡ್ ಎಡ್ವರ್ಡ, ಡಾ: ಪ್ಯಾಟ್ರಿಕ್ ಕ್ರಿಸ್ಟೋಫರ್, ಮತ್ತು ನರ್ಸ್ ಜೀನ್ ಮೆರಿಯನ್, ಈ ಸಾಧನೆಗಾಗಿ ಇವರಿಗೆ ೨೦೧೦ರಲ್ಲಿ ನೋಬೆಲ್ ಪಾರಿತೋಷಕ ದೊರೆತಿದೆ. ಪ್ರತಿ ನೂರು ದಂಪತಿಗಳಲ್ಲಿ ೧೦ ರಿಂದ ೧೫ ದಂಪತಿಗಳಿಗೆ ಮಕ್ಕಳಿಲ್ಲದ ಸಮಸ್ಯೆ ಕಾಡುತ್ತದೆ. ಗ್ರಾಮೀಣಾ ಪ್ರದೇಶದಲ್ಲಿ ಮಕ್ಕಳಿಲ್ಲದ ದಂಪತಿಗಳ ಜೀವನ ನರಕದಂತೆ ಕಾಣುತ್ತದೆ ಎಂದು ತಿಳಿಸಿದರು.
ಈ ಹಂತದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಸರಿ ಸಮಾನ ಕಾರಣಗಳಿದ್ದು, ಅವರಿಗೆ ಬೇಕಾಗುವ ಪರೀಕ್ಷೆಗಳು , ಚಿಕಿತ್ಸೆಗಳು ಸರಳ ಹಾರ್ಮೊನ್ ಮಾತ್ರೆಗಳಿಂದ ಹಿಡಿದು ದುಬಾರಿ ಐ.ವಿ.ಫ್. (ಕೃತಕ ಗರ್ಭಧಾರಣೆ) ಚಿಕಿತ್ಸೆಗಳ ಬಗ್ಗೆ, ಗ್ರಾಮೀಣಾ ಭಾಗದಲ್ಲಿ ಜನರಿಗೆ ಹತ್ತಿರವಾಗಿರುವ ಅಶಾ ಕಾರ್ಯಕರ್ತರಿಗೆ ವಿವರವಾಗಿ ತಿಳಿಸಬೇಕಾಗುತ್ತದೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯ ಹಂತದಲ್ಲಿ, ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಚಿಕಿತ್ಸೆ, ತಾಲ್ಲೋಕು ಹಂತದಲ್ಲಿ ದೊರೆಯುವ ಚಿಕಿತ್ಸೆ, ಮತ್ತು ನಂತರ ಜಿಲ್ಲಾ ಹಂತದಲ್ಲಿ ದೊರೆಯುವ ಚಿಕಿತ್ಸೆ ಬಗ್ಗೆ ವಿವರವಾಗಿ ತಿಳಿಸಲಾಗುತ್ತದೆ ಕಳೆದ ೫ ವರ್ಷಗಳಲ್ಲಿ ಕೇವಲ ಒಂದೇ ಒಂದು ಇದ್ದ ಮೆಡಿವೇವ್ ಕೃತಕ ಗರ್ಭಧಾರಣ ಕೇಂದ್ರದ ಜೊತೆ ಈಗ ಮೈಸೂರಿನಲ್ಲಿ ೧೫ ಕ್ಕೂ ಹೆಚ್ಚು ಕೃತಕ ಗರ್ಭಧಾರಣ ಕೇಂದ್ರಗಳಿವೆ .
ಹಾಗಾಗಿ ಸರ್ಕಾರ ಬಿ.ಪಿ.ಎಲ್. ಕಾರ್ಡ್ ಅಡಿಯಲ್ಲಿ ಉಚಿತ ಸೌಲಭ್ಯ ಕಲ್ಪಸಿದಲ್ಲಿ ಬಡಜನರ ಸಂಸಾರಗಳಲ್ಲಿ ಬೆಳಕು ಮೂಡಿ, ಸಂತೋಷ -ಸಂಭ್ರಮ ತರಬಹುದು ಎಂದು ಡಾ. ನಟರಾಜ್ ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ. ಭವಾನಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ನರು, ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ಸ್ವಾಗತಿಸಿದರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ನಿರೂಪಣೆ ಮಾಡಿದರು. ಐಊಗಿ ಪಾರ್ವತಿ , ಹಿರಿಯ ಆರೋಗ್ಯ ಈ ಕ್ಷಣಾಧಿಕಾರಿ ಮಹೇಶ್ , ಖಃSಏ ಡಾ. ರೇವಣ್ಣ. ಡಾ.ಅಂಬಿಕಾ ಮತ್ತು ಇತರೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ಸುಮಾರು ೧೫೦ ಜನ ಆಶಾ ಕಾರ್ಯಕರ್ತರು ಇದರ ಪ್ರಯೋಜ ಪಡೆದರು.