ಕಲಿಗಳ ಕರುನಾಡಿದು, ಸೊಬಗಿನ ಸುಂದರ ಚೆಲುವಿನ ಐಸಿರಿಯ ಜೇನಿನ ಗೂಡಿದು. ಕೃಷ್ಣೆ-ತುಂಗೆ-ಕಾವೇರಿಯ ಪವಿತ್ರ ನದಿಗಳ ಪಾವನ ಮಣ್ಣಿದು.
ರಾಜ ಮಹಾರಾಜರು ಆಳಿದ ನಾಡಿದು. ಪ್ರಾಣಾರ್ಪಣೆಗೈದ ವೀರರತ್ನಗಳು, ಜ್ಞಾನಪೀಠ ರತ್ನಗಳು ಸಾಹಿತಿ-ಕಲಾವಿದರು, ಚಿಂತಕರು ಹೀಗೆ ನೂರೆಂಟು ಜನರಿಂದೊಡಗೂಡಿದ ಸಪ್ತಕೋಟಿ ಜನರ ಸ್ವರ್ಗವಿದು ಕರ್ನಾಟಕ.
ಇಂಥ ಸ್ವರ್ಗಭೂಮಿಯಲ್ಲಿ ರಾಷ್ಟ್ರಕವಿ ಕುವೆಂಪು ಜನಿಸಿದ ಕುಪ್ಪಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಅಮ್ಮ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಗಾಯನವನ್ನು ಏರ್ಪಡಿಸಿ ಕಾವ್ಯ ಪ್ರವಾಸವನ್ನು ಜುಲೈ 27. 28 ಆಯೋಜಿಸಲಾಗಿದೆ.ನಿಮ್ಮ ಮಸ್ತಕದಿಂದ ಪ್ರತಿದಿನ ಅರಳುವ ಕಾವ್ಯ ಕುಸುಮಗಳಿಗೆ ಒಂದು ಅತ್ಯಾಕರ್ಷಕವಾದ ಶೀರ್ಷಿಕೆ ಕೊಟ್ಟು ರಚಿಸಿರುವ ನಿಮ್ಮ ಕಾವ್ಯ ಮಾಲೆಗಳು ರಾಷ್ಟ್ರಕವಿ ಕುವೆಂಪು ಕುಪ್ಪಳ್ಳಿ ಹೆಬ್ಬಾಗಿಲಿಗೆ ಅತ್ಯಾಕರ್ಷಕವಾದ ತೋರಣವಾಗಲಿ.
ಕವನ ಸಂಕಲನಕ್ಕೆ ಅಮ್ಮ ಶೀರ್ಷಿಕೆಯ ಕವಿತೆ ಒಂದನ್ನು ರಚಿಸಿ ಕಳುಹಿಸಿಕೊಡಿ. ನೂರೊಂದು ಕವಿಗಳ ಕವಿತೆಗಳನ್ನು ಪ್ರಕಟಿಸಲಾಗುವುದು. ಕವಿತೆಗಳನ್ನು ಕಳುಹಿಸಿರುವ ಕವಿಗಳಿಗೆ ಕಾರ್ಯಕ್ರಮದಲ್ಲಿ ಪುಸ್ತಕ ಸನ್ಮಾನ ನೀಡಲಾಗುವುದು.
ಕವಿತೆ ಕಳುಹಿಸಲು ಕೊನೆಯ ದಿನಾಂಕ ಜೂನ್ 20-7-24 ಕಾವ್ಯ ಪ್ರವಾಸದಲ್ಲಿ ಎಲ್ಲಾ ಕರುನಾಡಿನ ಕವಿಗಳಿಗೂ ಸಾಹಿತ್ಯಾಸಕ್ತರಿಗೂ ಕನ್ನಡ ಅಭಿಮಾನಿಗಳಿಗೂ ಸನ್ಮಿತ್ರರಿಗೂ ಬಂಧು-ಬಳಗದವರಿಗೂ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ ಸುಸ್ವಾಗತ.ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 95909 39909 ಸಂಪರ್ಕಿಸಲು ಜಾಗೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಬಿ. ತಿಳಿಸಿದ್ದಾರೆ.