ಉತ್ತಮ ಲಯದಲ್ಲಿರುವ ಭಾರತ ಮಹಿಳೆಯರ ತಂಡ ಐರ್ಲೆಂಡ್ ವಿರುದ್ಧದ ನಡೆಯುತ್ತಿರುವ 3 ದಿನಗಳ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಾಗಲೇ ಜಯಿಸಿದೆ.
ರಾಜ್ಕೋಟ್ನಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಸಾಂಘಿಕ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಮೃತಿ ಮಂದಾನ ಪಡೆ ಸರ್ವಾಧಿಕ 370 ರನ್ ಗಳಿಸಿತು. ಚೊಲ್ಲಚ ಶತಕ ಬಾರಿಸಿದ ಜೆಮಿಮಾ ರೋಡ್ರಿಗಸ್ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಜೆಮಿಮಾ ರೋಡ್ರಿಗಸ್ ಅವರ ಚೊಚ್ಚಲ ಶತಕದ ಜತೆಗೆ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ಮಹಿಳೆಯರ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 116 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸ್ಮೃತಿ ಮಂಧಾನ ಬಳಗ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಕೌಲ್ಟರ್ ರೀಲಿ (80) ಅವರ ಜವಾಬ್ದಾರಿಯುತ ಅರ್ಧ ಶತಕದ ಹೊಡೆದದ್ದು ಬಿಟ್ಟರೆ ಬೇರಾವ ಬ್ಯಾಟರ್ ಸಹ ಭಾರತ ತಂಡದ ಸಾಘಿಕ ಬೌಲಿಂಗ್ ಪ್ರದರ್ಶನದ ಎದುರು ಪ್ರತಿರೋಧ ತೋರಲು ಸಾಧ್ಯವಾಗಲೇ ಇಲ್ಲ. 100ನೇ ಏಕದಿನ ಪಂದ್ಯವನ್ನಾಡುತ್ತಿರುವ ಆಲ್ ರೌಂಡರ್ ದೀಪ್ತಿ ಶರ್ಮಾ ಅವರು 37ಕ್ಕೆ 3 ವಿಕೆಟ್ ಗಳಿಸಿದರು. ಜೊತೆಗೆ ಪ್ರಿಯಾ ಮಿಶ್ರಾ (53ಕ್ಕೆ 2) ಅವರ ಶಿಸ್ತಿನ ಬೌಲಿಂಗ್ ದಾಳಿಗೆ ಪ್ರವಾಸಿ ಐರ್ಲೆಂಡ್ ತಂಡ ನಲುಗಿತು.