ಜೆ.ಪಿ.ನಗರದ ವಿವೇಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಕಾಗಿದ್ದ ಗುರವಂದನಾ ಹಾಗೂ ಪ್ರತಿಭಾ ಪುರಸ್ಜಾರ ಕಾರ್ಯಕ್ರಮದಲ್ಲಿ 10ನೇ ತರಗತಿ ಮತ್ತು PUಅ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ 153 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹ ಧನ ನೀಡಲಾಯ್ತು.
ಇದೇ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರನ್ನು ಆಯಾ ಶಾಲೆಯ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯ್ತು.ಅಭ್ಯುದಯ ಸಂಸ್ಥೆಯ ಶ್ರೀ ಲಕ್ಷ್ಮೀ ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಸಾಹಿತಿ ಶ್ರೀ ವೈ ವಿ ಗುಂಡೂರಾವ್ ರವರು ಉದ್ಘಾಟಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಶ್ರೀ ಕ್ರಿಷ್ಣಪ್ಪನವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಸಂಸ್ಥೆಯ ಸಂಚಾಲಕ ಶ್ರೀ ಜಯರಾಮ್ , ಸಹ ಸಂಚಾಲಕ ಶ್ರೀ ಅನಂತರಾಮು, ಕಾರ್ಯದರ್ಶಿ ಶ್ರೀ ಪುಟ್ಟಣ್ಣ ಹಾಗೂ ಮಾಜಿ ಪಾಲಿಕೆ ಸದಸ್ಯರಾದ ಶ್ರೀಮತಿ ಶಶಿರೇಖಾ ಜಯರಾಮ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.