ದೇವನಹಳ್ಳಿ: ಈ ಸಂಸ್ಥೆ ಇಡಿ ದೇವನಹಳ್ಳಿಯಲ್ಲಿ ಸಮಾಜ ಸೇವೆಯನ್ನು ಮಾಡಿಕೊಂಡು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಗಂಗಾಧರ್ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಜೇಸಿಐ ದೇವನಹಳ್ಳಿ ಸಂಸ್ಥೆಯು ಏರ್ಪಡಿಸಿದ್ದ 22ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ ಉತ್ತಮ ಸಮಾಜಮುಖಿಯಾಗಿ ರೂಪಿಸಿಕೊಳ್ಳಲು ಸಮಾಜಕ್ಕೆ ಕಾಣಿಕೆಯಾಗಬಲ್ಲ ಯುವಜನತೆಯನ್ನು ರೂಪಿಸುವ ಹಾದಿಯಲ್ಲಿ ಜೇಸಿಐ ಸಂಸ್ಥೆ ಮುಂಚೂಣಿಯಲ್ಲಿದೆ ಯುವಕರಿಗೆ ವ್ಯಕ್ತಿತ್ವ ವಿಕಸನ ತರಪೇತಿಗಳನ್ನು ಮಾಡಿ ಮನ ಮುಟ್ಟುವಂತಹ ಕೆಲಸ ಮಾಡಬೇಕು ಎಂದರು
ನೂತನ ಅಧ್ಯಕ್ಷರಾದ ಶಿವಕುಮಾರ್ ಗೆ ಪ್ರಮಾಣ ವಚನ ಭೋದಿಸಿದ ವಲಯ 14ರ ಅಧ್ಯಕ್ಷ ಜೇಸಿ ವಿಜಯಕುಮಾರ್ ಮಾತನಾಡಿ ಜೇಸಿಐ ದೇವನಹಳ್ಳಿ 2003 ಈ ಸಂಸ್ಥೆ ಸ್ಥಾಪನೆಗೊಂಡು ಈಗ 21 ವರ್ಷ ತುಂಬಿ 22ನೇ ವರ್ಷಕ್ಕೆ ಬಂದಿದೆ ಎಂದರೆ ಅದು ಪೂರ್ವಾಧ್ಯಕ್ಷರುಗಳ ಸಹಕಾರ ಜೇಸಿಐ ಸಂಸ್ಥೆಯು 120 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಜೇಸಿಐ ಸಂಸ್ಥೆಯು ಯವಕರಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಏನಾದರು ಕಾಣಿಕೆ ನೀಡುವಂತಾಗುವ ತರಪೇತಿಯನ್ನು ಸಂಸ್ಥೆ ನೀಡುತ್ತದೆ ಎಂದು ತಿಳಿಸಿದರು
ಜೇಸಿಐ ದೇವನಹಳ್ಳಿ 2023-24 ನೇ ಅಧ್ಯಕ್ಷ ಜೇಸಿ ಕಿರಣ್ ಯಾಧವ್ ಮಾತನಾಡಿ ತನ್ನ ಈ ವರ್ಷದ ಹಲವಾರು ಕಾರ್ಯಕ್ರಮಗಳಿಗೆ ಸಂಸ್ಥೆಯ ಪೂರ್ವಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದ್ದೀರಿ ಜೇಸಿಐ ದೇವನಹಳ್ಳಿ ಸಂಸ್ಥೆಗೆಸುದೀರ್ಘ ಇತಿಹಾಸವಿದ್ದು ಕಳೆದ 21 ವರ್ಷ
ಗಳಿಂದ ಸಮಾಜದಲ್ಲಿ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದುಮುಂದಿನ ನೂತನ ಅಧ್ಯಕ್ಷರು ಸಹ ಮುಂದು ವರಸಿಕೊಂಡು ಹೊಗುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪಿಳ್ಳರಾಜುರವರಿಗೆ ಸನ್ಮಾನಿಸಿ ಗೌರವಿಸಲಾಯಿತುಕಾರ್ಯಕ್ರಮದಲ್ಲಿ ನಿಕಟಪೂರ್ವಾಧ್ಯಕ್ಷ ವೇಣು
ಗೋಪಾಲ್, ನರಸಿಂಹಮೂರ್ತಿ, ಕಾರ್ಯದರ್ಶಿ ಸಿದ್ದಪ್ಪ, ಜೇಸಿ ಅನಿಲ್, ಯೋಜನಾ ನಿರ್ದೇಶಕರಾದ ಜೇಸಿ ಡಿ.ಎನ್ ಸುರೇಶ್ ಕುಮಾರ್, ನೂತನ ಅಧ್ಯಕ್ಶ ಶಿವಕುಮಾರ್ ಮತ್ತು ಪೂರ್ವಾಧ್ಯಕ್ಷರುಗಳಾದ ಜಿ.ಎ ರವೀಂದ್ರ, ಎಂ, ಆನಂದ, ಪಿಳ್ಳಪ್ಪ, ಡಿ.ಎನ್ ನಾರಾಯಾಣಸ್ವಾಮಿ, ವಿಜಯಕುಮಾರ್, ಎನ್.ರಮೇಶ್, ಭಾಗ್ಯರಮೇಶ್, ವಿ.ಮಂಜುನಾಥ್, ಕೆ.ನಾಗೇಂದ್ರಪ್ರಸಾದ್, ಬಾಬು ಗೌಡ, ಪ್ರಭುದೇವ್ ನರಸಿಂಹಮೂರ್ತಿ, ಮುನಿಕೃಷ್ಣ, ಹರ್ಷ, ಪ್ರವೀಣ್ ಕುಮಾರ್ ಹಾಜರಿದ್ದರು.