ಪ್ರೊ ಕಬಡ್ಡಿ ಲೀಗ್ನ 11ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗೆಲ್ಲುವ ಮೂಲಕ ಅಭಿಯಾನ ಶುರು ಮಾಡಿದೆ.
ಭಾನುವಾರ ಹೈದರಾಬಾದ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು.
ಪಟ್ಟು ಬಿಡದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 34-39 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಟೂರ್ನಿಯಲ್ಲಿ ಬೆಂಗಾಲ್ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದು,ಸೋಲಿನ ಕಹಿ ಅನುಭವಿಸಿದೆ.
ಬೆಂಗಳೂರು ಬುಲ್ಸ್ಗೆ ಸಿಗದ ಗೆಲುವು: ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆಲುವಿಗಾಗಿ ಸೆಣಸಾಡಿತು. ಆದರೆ ಬೆಂಗಳೂರು ಬುಲ್ಸ್ ಹೋರಾಟಕ್ಕೆ ಗೆಲುವು ಸಿಗಲಿಲ್ಲ. ಭರ್ಜರಿ ಪ್ರದರ್ಶನ ತೋರಿದ ಗುಜರಾತ್ ಜೈಂಟ್ಸ್ 36-32 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು.