ಮೈಸೂರು: ಜೈಲಿನಲ್ಲಿ ಎಸೆನ್ಸ್ ಕುಡಿದು ಅನಾರೋಗ್ಯಕ್ಕೀಡಾಗಿದ್ದ ಮೂವರು ಖೈದಿಗಳ ಪೈಕಿ ಓರ್ವ ಕೈದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸ್ವಾತೇಹಳ್ಳಿಯ ಮಾದೇಶ್ ಎಂಗಾತ ಮೃತಪಟ್ಟಿರುವ ಕೈದಿಯಾಗಿದ್ದ, ಇನ್ನಿಬ್ಬರು ಕೈದಿಗಳಾದ ರಮೇಶ್ ನಾಗರಾಜ್ಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹೊಸ ವರ್ಷದ ಅಂಗವಾಗಿ ಕೇಕ್ ತಯಾರಿಸಲು ಎಸೆನ್ಸ್ ತರಲಾಗಿತ್ತು. ನಶೆ ಬರಲು ಮೂವರು ಖೈದಿಗಳು ಅದನ್ನೇ ಕುಡಿದಿದ್ದರು ಎಂದು ತಿಳಿದು ಬಂದು ಅಸ್ವಸ್ಥರಾಗಿದ್ದ ಇವರು ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷಕ್ಕೆ ಮೂರು ದಿನ ಮುಂಚೆಯೇ ಡಿಸೆಂಬರ್ 28ರಂದು ಎಸೆನ್ಸ್ ಕುಡಿದಿದ್ದ ಇವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರ ಒತ್ತಾಯದ ಮೇರೆಗೆ ಎಸೆನ್ಸ್ ಕುಡಿದಿರುವ ನಿಜಾಂಶವನ್ನು ತಿಳಿಸಿದ್ದರು.