ದೇವನಹಳ್ಳಿ : ದೇವನಹಳ್ಳಿ ಹಳೇಬಸ್ ನಿಲ್ದಾಣದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದಿಂದ 26ನೇ ವರ್ಷದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು ಬೆಳಿಗ್ಗೆ ಧ್ವಜಾರೋಹಣ ಸಂಜೆ ಆಟೋಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದರು.
ಈ ಸಮಯದಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿದ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ಮುನಿಯಪ್ಪ ಮಾತನಾಡಿ ಆಟೋ ಚಾಲಕರು ಕಷ್ಠಪಟ್ಟು ದುಡಿಮೆ ಮಾಡುತ್ತಾರೆ, ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಯಾರಾದರೂ ಮಾಡುತ್ತಿದ್ದಾರೆ ಎಂದರೆ ಅವರು ಆಟೋ ಚಾಲಕರು, ತಮ್ಮ ಆಟೋಗಳಲ್ಲಿ ಕನ್ನಡವನ್ನು ನೆನಪಿಸುವ ಚಿತ್ರಗಳನ್ನು ಹಾಕಿ ಕನ್ನಡತನವನ್ನು ಮೆರೆಯುವಂತೆ ಮಾಡುತ್ತಾರೆ ನಿರಂತರವಾಗಿ 26ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾ ಬಂದಿರುವುದು ಶ್ಲಾಘನೀಯ, ಅವರ ಕಷ್ಟಗಳಿಗೆ ಸ್ಪಂದಿಸಿ ಸರ್ಕಾರದಿಂದ ಅವರಿಗೆ ಅನುಕೂಲಕರ ಕೆಲಸ ಮಾಡಿಕೊಡಲು ಸಿದ್ದ ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ ಆಟೋ ಮಾಲಿಕರು ಚಾಲಕರ ಸಂಘದವರು ಸ್ಥಿತಿವಂತರಲ್ಲ ಬೆಳಿಗ್ಗೆಯಿಂದ ರಾತ್ರಿವರೆಗೂ ದುಡಿದು ಬದುಕು ನಡೆಸಿಕೊಂಡು ಹೋಗುತ್ತಾರೆ, ಅವರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡಿದ್ದೇನೆ, ಪ್ರತಿವರ್ಷ ಬಡಜನರಿಗೆ ಹಾಗು ಅಂಗವಿಕಲರಿಗೆ ವೃದ್ಧರಿಗೆ ಬಟ್ಟೆ, ರಗ್ಗು, ಶಾಲಾ ಮಕ್ಕಳಿಗೆ ಪುಸ್ತಕ, ಅನ್ನಸಂತರ್ಪಣೆ ಹಾಗೂ ಅವರಿಗೆ ಅನುಕೂಲವಾಗುವ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ ಅವರ ಸೇವೆ ಅನನ್ಯ ಎಂದರು.
ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ ನಮ್ಮ ನಾಡಿಗೆ ಕರ್ನಾಟಕ ಎಂದು ಹೆಸರು ಬಂದು 50ವರ್ಷ ತುಂಬಿದ್ದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡಬೇಕು, ನಮ್ಮ ಜನ ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು ಕನ್ನಡ ಕಲಿಯಬೇಕು, ಬೇರೆ ರಾಜ್ಯಗಳಿಗೆ ಹೋದರೆ ಅವರು ತಮ್ಮ ಬಾಷೆಯಲ್ಲಿಯೇ ಉತ್ತರ ನೀಡುತ್ತಾರೆ ನಮ್ಮ ಕನ್ನಡ ಜನ ಬೇರೆ ರಾಜ್ಯದವರ ಭಾಷೆ ಮಾತನಾಡುತ್ತಾರೆ ಅದನ್ನು ಬಿಟ್ಟು ಕನ್ನಡದಲ್ಲಿಯೇ ಅವರಿಗೆ ಉತ್ತರ ನೀಡಿ ಕನ್ನಡ ಕಲಿಸುವಂತಾಗಬೇಕು, ಕನ್ನಡದಲ್ಲಿ ವ್ಯವಹರಿಸಿ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸಿ ಎಂದರು.
ಮುಖಂಡರುಗಳಾದ ಎಸ್.ಆರ್. ರವಿ ಕುಮಾರ್, ಪುರಸಭಾ ಸದಸ್ಯರಾದ ಜಿ.ಎ.ರವೀಂದ್ರ, ಮುನಿಕೃಷ್ಣ, ನಿಲೇರಿ ನಾರಾಯಣಸ್ವಾಮಿ, ಶ್ರೀಧರ
ಮೂರ್ತಿ, ವೇಣುಗೋಪಾಲ್, ಎಸ್.ಸಿ. ಚಂದ್ರಪ್ಪ,ಕೆ.ವೆಂಕಟೇಶ್, ಶಿಕ್ಷಕ ಪುಟ್ಟಸ್ವಾಮಿ, ಸಂಘದ ಗೌ|| ಅಧ್ಯಕ್ಷ ಬಿ.ದೇವರಾಜು, ಸೈಕಲ್ ರೇಸ್ ರವಿಕುಮಾರ್, ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಎಲ್. ನಾಗೇಂದ್ರರಾವ್ ಶಿವಶಂಕರಪ್ಪ, ಮುನಿಯಲ್ಲಪ್ಪ, ಪ್ರ.ಕಾರ್ಯದರ್ಶಿ ಮುನಿಕೃಷ್ಣ, ಸಹಕಾರ್ಯದರ್ಶಿ ಕೆ.ವೇಣು, ಖಜಾಂಚಿ ಸೋಮಶೇಖರ್, ಸಂ.ಕಾರ್ಯದರ್ಶಿ ಎನ್.ಮುರಳಿ, ಸದಸ್ಯರಾದ ಮುನಿಯಪ್ಪ, ಗಂಗಾಧರ್.ಸಿ, ಹನುಮಂತಪ್ಪ, ಎನ್.ಮಂಜುನಾಥ್, ಎಂ. ನಾರಾಯಣಸ್ವಾಮಿ, ಎನ್. ನರಸಿಂಹಮೂರ್ತಿ, ನಾಗೇಶ್ಬಾಬು, ಬರ್ಮಾಹರೀಶ್ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.