ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಜೊನ್ನಹಳ್ಳಿ ಗ್ರಾಮದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ನೂತನ ದೇವಾಲಯ ಜೀರ್ಣೋದ್ಧಾರ ರಾಜಗೋಪುರ ಮಹಾಸಂ ಪ್ರೋಕ್ಷಣೆ ಹಾಗೂ ದ್ವಜಸ್ತಂಭ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಅದ್ದೂರಿಯಾಗಿ ನಡೆಯಿತು.ಪೂಜಾ ಕಾರ್ಯಕ್ರಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿ. ಎಲ್ ಏನ್ ಭಾಗವಹಿಸಿ ದೇವರ ದರ್ಶನ ಪಡೆದು ದೇವಾಲಯ ಸೇವಾ ಸಮಿತಿಯಿಂದ ಅಭಿನಂದನೆಗಳನ್ನು ಸ್ವೀಕರಿಸಿ ನಂತರ ಮಾತನಾಡಿದರು.
ಜೊನ್ನಹಳ್ಳಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರದಲ್ಲಿ ಭಾಗವಹಿಸಿ ಬಹಳ ಸಂತೋಷವಾಯಿತು. ದೇವರಲ್ಲಿ ಎಲ್ಲರಿಗೂ ಒಳ್ಳೆಯ
ದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಮತ್ತು ದೇವಾಲಯ ಸೇವಾ ಸಮಿತಿಯ ಮುಖಂಡರಾದ ಜೊನ್ನಹಳ್ಳಿ ಮುನಿರಾಜು ಮಾತನಾಡಿ ನೂತನ ದೇವಾಲಯದ ಕಟ್ಟಡಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀ ಅಭಯ ಆಂಜನೇಯ ಸ್ವಾಮಿ ಆಯುಷ್ ಆರೋಗ್ಯ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೈಯಪ ಅಧ್ಯಕ್ಷ ಶಾಂತ ಕುಮಾರ್. ವಿ ಮುಖಂಡರಾದ ದೊಡ್ಡಸಣ್ಣೇ ಮುನಿರಾಜು, ಆರ್.ಕೆ. ನಂಜೇಗೌಡ, ಯಲಿಯೂರು ಹನುಮಪ್ಪ, ಜನಕಮಣಿ, ಚಂದ್ರಶೇಖರ್ ಸೇರಿದಂತೆ ಹಲವಾರು ಮುಖಂಡರು, ಪ್ರಧಾನ ಅರ್ಚಕರಾದ ಎಸ್. ಪ್ರಕಾಶ್ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿಯ ಸಮಸ್ತ ಭಕ್ತಾದಿಗಳು, ಜೊನ್ನಹಳ್ಳಿ ಗ್ರಾಮ ಒಕ್ಕಲು ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು.