ಬೆಂಗಳೂರು: ಕಠಿಣ ಪರಿಶ್ರಮ ಹಾಗ ಪ್ರಾಮಾಣಿಕ ಪ್ರಯತ್ನದ ಜ್ಞಾನಾರ್ಜನೆಗೆ ಒತ್ತು ನೀಡಿ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ ಕರೆ ನೀಡಿದರು.
10 ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡಾ 90% ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ, ಜಯನಗರದಲ್ಲಿರುವ ಆಡಿ. ಎಚ್ ಎನ್ ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ 24 ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಡೀನ್ಸ್ ಮೆರಿಟ್ ಪ್ರಶಸ್ತಿ ಮತ್ತು ನಾಲ್ವರಿಗೆ ಆನಿ ಬೆಸೆಂಟ್ ಪ್ರಶಸ್ತಿಯನ್ನು ನೀಡಿ ಮಾತನಾಡಿದರು. ಪದವಿ ಹಂತದ ಒದು ನಮ್ಮ ವೃತ್ತಿ ಜೀವನದ ಭವಿಷ್ಯದ ಅಡಿಪಾಯ. ಈ ಹಂತದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ಒತ್ತು ನೀಡಬೇಕು.
ಪದವಿ ಪಡೆಯುವ ಮುಂದಿನ ವರ್ಷಗಳು ನಿರ್ಣಾಯಕವಾಗಿ ರುತ್ತವೆ. ಉತ್ತಮ ವಿದ್ಯಾಭ್ಯಾಸ ನಮ್ಮ ವೃತ್ತಿ ಜೀವನ ಅಷ್ಟೇ ಅಲ್ಲ ನಮ್ಮ ಜೀವನದ ಸರ್ವತೋಮುಖ ಬೆಳವಣಿಗೆಗೂ ಅಗತ್ಯವಾಗಿದೆ. ಇದನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.ಆಡಿ. ಎಚ್ ಎನ್ ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಜಯದೇವಪ್ಪ ಮಾತನಾಡಿ, ನಾವು ಎಲ್ಲಾಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತೇವೆ ಮತ್ತುಅವರ ಶೈಕ್ಷಣಿಕ ಮತ್ತು ವೃತ್ತಿಪರ ವೃತ್ತಿಜೀವನದಲ್ಲಿ ಅವರ ನಿರಂತರ ಯಶಸ್ಸನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೇವೆ.
ವಿದ್ಯಾರ್ಥಿಗಳು ಪದವಿಯಲ್ಲೂ ಇದೇ ರೀತಿಯ ಸಾಧನೆ ಮಾಡಲಿ ಎಂದು ಹಾರೈಸುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಡಾ. ಸುಬ್ರಹ್ಮಣ್ಯ, ಅಧ್ಯಕ್ಷ ಎನ್ಇಎಸ್ ಕರ್ನಾಟಕ, ವಿ. ವೆಂಕಟಶಿವಾರೆಡ್ಡಿ, ಅಧ್ಯಕ್ಷರು – ಆಡಿ. ಊಓಓಅಇ, ಡಾ. ಪಿ.ಎಲ್. ವೆಂಕಟರಾಮ ರೆಡ್ಡಿ ಅಧ್ಯಕ್ಷರು – ನ್ಯಾಷನಲ್ ಕಾಲೇಜು, ಜಯನಗರ, ಡಾ. ಏಓಃ ಮೂರ್ತಿ, ಮುಖ್ಯಮಾರ್ಗದರ್ಶಕರು – ಡಾ. ಊಓಓಅಇ, ಡಾ. ಡಿ. ಜಯದೇವಪ್ಪ ಪ್ರಾಂಶುಪಾಲರು – ಆಡಿ. ಊಓಓಅಇ., ಶಿಕ್ಷಣ ಕ್ಷೇತ್ರದಿಂದ, ಅಧ್ಯಾಪಕರು,ಪೋಷಕರು, ವಿದ್ಯಾರ್ಥಿಗಳು ಮತ್ತು ಪ್ರಮುಖ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.