ಬೆಂಗಳೂರು: ನಗರದ ವಿದ್ಯಾರಣ್ಯ ಪುರ ಬಡಾವಣೆಯಲ್ಲಿ ‘ಗೋಲ್ಡ್ ಟ್ರೀ ಆಸ್ಟೊçÃ’ ಸಂಸ್ಥೆ ವತಿಯಿಂದ ಜೋತಿಷ್ಯ ರತ್ನ ಪದವಿ ಪ್ರದಾನ ಹಾಗೂ ಸುವರ್ಣ ಸಂಭ್ರಮ ರಾಜ್ಯೋತ್ಸವ ಆಚರಣೆ ನಡೆಯಿತು.
‘ನಕ್ಷತ್ರ ನಾಡಿ’ ಖ್ಯಾತಿಯ ‘ಗೋಲ್ಡ್ ಟ್ರೀ ಆಸ್ಟೊçÃ’ ಸಂಸ್ಥಾಪಕ ಮುಖ್ಯಸ್ಥರಾದ ಪಂ. ದಿನೇಶ್ ಎನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು.
ಹಿರಿಯ ಚಲನಚಿತ್ರ ಕಲಾವಿದೆ ನಾಗಿಣಿ ಭರಣ, ಹಿರಿಯ ಸರ್ಕಾರಿ ಅಧಿಕಾರಿ ಹಿರೇಮನಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪದವಿ ಪ್ರದಾನ ಮಾಡಿದರು.
ಜಾನಪದ ಕಲಾ ತಂಡಗಳು ಹಾಗೂ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ಜನ-ಮನ ಸೆಳೆದವು. ಈ ಸಂದರ್ಭದಲ್ಲಿ ಮಾತನಾಡಿದ ಪಂ. ದಿನೇಶ್ ಗುರೂಜಿ, ವೈಜ್ಞಾನಿಕ ಜೋತಿಷ್ಯ ಶಾಸ್ತç ಪ್ರಸಾರಕ್ಕೆ ಹಾಗೂ ಶ್ರೀಸಾಮಾನ್ಯರಿಗೂ ಜೋತಿಷ್ಯ ಶಾಸ್ತç ಪರಿಚಯಿಸುವ ಉದ್ದೇಶದಿಂದ ‘ನಕ್ಷತ್ರ ನಾಡಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜ್ಯೋತಿಷ್ಯ ಶಾಸ್ತçದ ಕುರಿತಾಗಿ ಆಳವಾಗಿ ಬೇರೂರಿರುವ ಮೂಢನಂಬಿಕೆಗಳನ್ನು ದೂರವಾಗಿಸಿ, ಶುದ್ಧ ವೈಜ್ಞಾನಿಕ ತಳಹದಿಯ ಜೋತಿಷ್ಯ ಶಾಸ್ತç ಪರಿಚಯಿಸುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.
ಇದೇ ವೇಳೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
`ಜ್ಯೋತಿಷ್ಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ
