ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶ ಹಾಗೂ ನಗರದಿಂದ ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ರಾಸಾಯನಿಕ ನೀರನ್ನು ನಿಲ್ಲಿಸಲು ಆಗ್ರಹಿಸಿ ಜನವರಿ 26 ರಂದು ಅಧಿಕಾರಿಗಳ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಪ್ಪು ಬಾವುಟವನ್ನು ಎರಡು ಪಂಚಾಯತಿಯ ಮನೆಗಳ ಮೇಲೆ ಹಾರಿಸಲು ನಿರ್ಧರಿಸಲಾಗಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಮುಖಂಡ ವಸಂತ್ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯ
ಹಾಗೂ ಕಲುಷಿತ ನೀರನ್ನ ದೊಡ್ಡ ತುಮಕೂರು ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗಳಿಗೆ ಬಿಡುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 28ಕ್ಕೂ ಹೆಚ್ಚು
ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ರಾಸಾ ಯನಿಕ ನೀರು ಬಿಟ್ಟಿರುವುದನ್ನು ಫೋಟೋ ಮತ್ತು ವಿಡಿಯೋ ಸಮೇತ ದಾಖಲೆಗಳೊಂದಿಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವೆಂದರೆ ತಪ್ಪಲ್ಲ.
ನಮ್ಮ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ಪಶು, ಪಕ್ಷಿ ಹಾಗೂ ಮನುಷ್ಯರ ಆರೋಗ್ಯಕ್ಕೆ ಮಾರಕವಾಗಿ ಹಾನಿ ಮಾಡುವ ಹೆವಿ ಮೆಟಲ್ಸ್ (ಭಾರಿ ಲೋಹಗಳು) ನೂರಾರು ಪಟ್ಟು ಹೆಚ್ಚು ಕಂಡುಬಂದಿರುತ್ತದೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾರ್ಖಾನೆಗಳಿಂದ ನೀರು ಹೊರಗೆ ಬಿಡಬಾರದು ಎಂಬ ಕಾನೂನಿದ್ದರೂ, ಯಾವುದೇ ರೀತಿಯ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಾರೆ.
ಕಾರ್ಖಾನೆಗಳು ಅಕ್ರಮವಾಗಿ ರಾಸಾಯನಿಕ ನೀರು ಹೊರಗಡೆ ಬಿಟ್ಟರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದೆ ರೀತಿ ದೊಡ್ಡಬಳ್ಳಾಪುರ ನಗರಸಭೆ ಹಾಗೂ ಭಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಳಚೆ ನೀರು, ರಾಸಾಯನಿಕ ನೀರು ನೇರವಾಗಿ ಕೆರೆಗಳಿಗೆ ಬಿಡುತ್ತಿದ್ದಾರೆ. ಎಲ್ಲದಕ್ಕೂ ಕಡಿವಾಣ ಹಾಕಲು ಕಾನೂನಾತ್ಮಕವಾದ ಹಾಗೂ ಶಾಂತಿಯುತವಾದ ಅನೇಕ ಹೋರಾಟಗಳು ನಡೆಸಿದ್ದರು ಯಾವುದೇ ಪ್ರಯೋಜನ ಆಥವಾ ಪರಿಹಾರ ದೊರೆತ್ತಿಲ್ಲ.
ಜಿಲ್ಲಾಧಿಕಾರಿಗಳು ಹೋರಾಟದ ಸಮಯದಲ್ಲಿ ಮಾತ್ರವೇ ಬರುತ್ತಾರೆ ನಾಲ್ಕು ತಿಂಗಳಲ್ಲಿ ಎಸ್ಟಿಪಿ ಘಟಕ ಕೆಲಸ ಶುರು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಅರು ತಿಂಗಳು ಕಳೆದರೂ ಯಾವುದೇ ಕೆಲಸ ಪ್ರಾರಂಭಿಸಿಲ್ಲ. ನಾವು ಬಳಸುವ ನೀರನ್ನು ಕಾಡನುರು ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸಿ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ ಅದು ಸಹ ಆಗಿಲ್ಲ.
ನಂತರ ಮುಖಂಡ ಸತೀಶ್ ಮಾತನಾಡಿ ನಮ್ಮ ಮೂಲಭೂತ ಹಕ್ಕುಗಳಿಗಾಗಿ ಎಷ್ಟೇ ಹೋರಾಟ ಮಾಡಿದರೂ ಯಾವುದೇ ಪರಿಹಾರ ಸಿಗದೇ ಇರುವ ಕಾರಣ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಆರ್ಕಾವತಿ ನದಿಯ ಉಳಿವಿಗಾಗಿ ಜೀವ ಸಂಕುಲದ ರಕ್ಷಣೆಗಾಗಿ ಇಂದು ಹೋರಾಟ ಮಾಡಲೇ ಬೇಕಾದ ಅನಿವಾರ್ಯವಾಗಿದೆ.
ಅಧಿಕಾರಿ ವರ್ಗದವರು ರಾಜಕೀಯ ವರ್ಗದವರು ಸಂವಿಧಾನಕ್ಕೆ ವಿರುದ್ಧವಾಗಿ ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ರಾಸಾಯನಿಕ ನೀರನ್ನು ನಿಲ್ಲಿಸಲು ಆಗ್ರಹಿಸಿ ಜನವರಿ 26 ರಂದು ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿರುದ್ಧ ಕಪ್ಪು ಬಾವುಟವನ್ನು ಎರಡು ಪಂಚಾಯತಿಯ ಮನೆ ಮನೆಯ ಮೇಲೆ ಆರಿಸಲು ನಿರ್ಧರಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕೆ ವರ್ಗಾಯಿಸಬೇಕು. ದೊಡ್ಡಬಳ್ಳಾಪುರದ ಕೊಳಚೆನೀರಿಗೆ ವೈಜ್ಞಾನಿಕ ಶುದ್ದೀಕರಣ ಘಟಕ ಸ್ಥಾಪಿಸಬೇಕು. ಕಾಡನೂರು ಪಂಚಾಯಿತಿಯಿಂದ ಅತಿ ಜರೂರಾಗಿ ಕೊಳವೆಬಾವಿ ಕೊರೆಸಿ ಎರಡು ಪಂಚಾಯಿತಿಗೆ ನೀರು ಕೊಡಬೇಕು.ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಎಂದರು. ಗೋಷ್ಟಿಯಲ್ಲಿ ಕಾಳೇಗೌಡ ಸೇರಿದಂತೆ ವೇದಿಕೆಯ ಮುಖಂಡರು ಇದ್ದರು.