ಮಾರ್ಗಂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ನ ಕಲಾತ್ಮಕ ನಿರ್ದೇಶಕಿ ವಿದುಷಿ ಶ್ರೀಮತಿ ದೀಪ ಸುಧೀಂದ್ರ ಅವರ ಮಾರ್ಗ ದರ್ಶನದಲ್ಲಿ ೨೦೨೪ರ ನವೆಂಬರ್ ೮ರಂದು ನಡೆದ ವೈಭವದ ಕಾರ್ತೀಕ ನೃತ್ಯೋತ್ಸವ ‘ನೃತ್ಯೋನ್ನತಿ’ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಗೆ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಸುನಂದಾದೇವಿ, ವಿದ್ವಾನ್ ಶ್ರೀ ಉದಯಕೃಷ್ಣಉಪಾಧ್ಯಾಯ, ವಿದುಷಿ ರೂಪಶ್ರೀ ಮಧುಸೂದನ್, ಮತ್ತು ವಿದುಷಿ ಅನುರಾಧ ಉಪಾಧ್ಯಾಯ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತISಖಔ ವಿಜ್ಞಾನಿ ಶ್ರೀ ಟಿ. ಎಸ್. ನಾಗರಾಜ ಉಪಾಧ್ಯಾಯ ಹಾಗೂ ನಾಟ್ಯ ಕಮಲೆ ವಿದುಷಿ ಶ್ರೀಮತಿ ಲೀಲಾವತಿ ಉಪಾಧ್ಯಾಯ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಬೆಳಕು ನೀಡಿದರು.
ಮುಖ್ಯ ಅತಿಥಿಗಳಾಗಿ ವಿದುಷಿ ಸುನಂದಾ ದೇವಿ ಅವರು ಮಾತನಾಡುತ್ತಾ, “ಇಂತಹ ಸಾಂಸ್ಕೃತಿಕ ಮಹೋತ್ಸವಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವ ಮಾತ್ರ ವಲ್ಲ, ಮುಂದಿನ ತಲೆಮಾರಿಗೆ ಕಲೆಯ ಆಳವಾದ ಮಹತ್ವವನ್ನು ತಲುಪಿಸಲು ಸಕಾಲವಾದ ವೇದಿಕೆ ಒದಗಿಸುತ್ತವೆ. ಮಾರ್ಗಂ ನೃತ್ಯ ಶಾಲೆಯ ವಿದ್ಯಾರ್ಥಿಗಳ ಅದ್ವಿತೀಯ ನೃತ್ಯ ಕೌಶಲ್ಯ, ಶ್ರದ್ಧಾ, ಮತ್ತು ಸಮರ್ಪಣೆ ನನಗೆ ಅಪಾರ ಸಂತೋಷ ನೀಡಿದವು. ಅವರ ನೃತ್ಯಗಳಲ್ಲಿ ತೋರಿದ ಪ್ರೌಢತೆಯನ್ನು ನೋಡಿದಾಗ ಕಲೆಯ ಮೇಲೆ ಅವರ ನಿರಂತರ ಪರಿಶ್ರಮ ಸ್ಪಷ್ಟವಾಗುತ್ತದೆ,” ಎಂದು ಪ್ರಶಂಸಿಸಿದರು.
ಅವರ ಜೊತೆಗೆ, ವಿದುಷಿ ರೂಪಶ್ರೀ ಮಧುಸೂದನ್, ಶ್ರೀ ನಾಗರಾಜ ಉಪಾಧ್ಯಾಯ ಮತ್ತು ವಿದ್ವಾನ್ ಉದಯಕೃಷ್ಣ ಉಪಾಧ್ಯಾಯರೂ ತಮ್ಮ ಅಭಿಪ್ರಾಯ ಹಂಚಿಕೊAಡು, “ಮಾರ್ಗಂ ನೃತ್ಯ ಶಾಲೆಯ ವಿದ್ಯಾರ್ಥಿಗಳು ಶಿಷ್ಟಾಚಾರ ಮತ್ತು ನೃತ್ಯದ ಪ್ರಾಮಾಣಿಕತೆಯನ್ನ ಅರ್ಥ ಮಾಡಿಕೊಂಡು ತೀವ್ರ ಪರಿಶ್ರಮದಿಂದ ಕಲೆಯನ್ನು ಪ್ರಪಂಚಕ್ಕೆ ಮೊಳಗಿಸುವ ಉದ್ದೇಶದಲ್ಲಿ ಮುನ್ನಡೆಯುತ್ತಿದ್ದಾರೆ. ಅವರ ನೃತ್ಯದಲ್ಲಿ ಪ್ರತಿಯೊಂದು ಹಂದರವು ಆಕರ್ಷಕವಾಗಿ ಮೂಡಿಬಂದಿದ್ದು, ಅವರ ನಿಷ್ಕಳಂಕ ಅಭ್ಯಾಸ ಹಾಗೂ ನೃತ್ಯದ ಮೇಲಿನ ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಶ್ರಮಶೀಲ ವಿದ್ಯಾರ್ಥಿಗಳು ಭವಿಷ್ಯದ ನೃತ್ಯ ಪರಂಪರೆಯ ಹೆಜ್ಜೆಗಳು,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾದ ಮಾರ್ಗಂ ನೃತ್ಯ ಶಾಲೆಯ ಪುಟ್ಟ ಮಕ್ಕಳಿಂದ ಹಿರಿಯರತನಕ ಪ್ರದರ್ಶಿಸಲಾದ ಪುಷ್ಪಾಂಜಲಿ, ಮಲ್ಲಾರಿ, ಗಣಪತಿಕೃತಿ, ಸರಸ್ವತಿ ಕೌತ್ವಮ್, ರಾಜರಾಜೇಶ್ವರಿಕೃತಿ, ಇತ್ಯಾದಿ ನೃತ್ಯಗಳು ಕಲಾಸಕ್ತರನ್ನ ಮಂತ್ರಮುಗ್ಧ ಗೊಳಿಸಿತು ಹಾಗೂ ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದಕಲಾವಿದರಿAದ ಗಣೇಶಕೃತಿ, ಶಿವ ಕೃತಿ, ವೃಂದಾವನಿ ವೇಣು ನೃತ್ಯಗಳು, ಪ್ರೇಕ್ಷಕರ ಮನವನ್ನು ಸೆಳೆಯಿತು. ಅಂತೆಯೇ, ಲೀಲಾ ನಾಟ್ಯಕಲಾವೃಂದದ ಶ್ರೇಷ್ಠ ಷಡಾಕ್ಷರಕೌತ್ವಮ್, ಚಾಮುಂಡೇಶ್ವರಿಕೃತಿ, ನಟರಾಜಕೃತಿ, ತಿಲ್ಲಾನಂ ನೃತ್ಯ ಪ್ರದರ್ಶನಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದವು.
ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಚಂದ್ರಶೇಖರ್ರವರ ಆಶೀರ್ವಚನ ಮಾತುಗಳು, ಕಾರ್ಯಕ್ರಮಕ್ಕೆ ಹೊಸ ಪ್ರೇರಣೆ ನೀಡಿದವು.