ಧಾರವಾಡ: ಟಿಟಿ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಸಾವಿಗೀಡಾಗಿರುವ ಅವಘಡ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ ಸಮೀಪ ಮುಂಜಾನೆ ಸಂಭವಿಸಿದೆ.
ಲಾರಿಯಲ್ಲಿದ್ದ ಸವದತ್ತಿ ತಾಲ್ಲೂಕಿನ ಶಿರಸಂಗಿಯ ಹನುಮಂತ ಮಲ್ಲಾಡ್ (36), ಮಹಾಂತೇಶ ಚವಾಣ (37) ಹಾಗೂ ಮಹಾದೇವಪ್ಪ ಹುಲ್ಲಳ್ಳಿ (39) ಮೃತಪಟ್ಟವರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಂಗಿಯಿಂದ ಗೋವಾ ಕಡೆಗೆ ಸಾಗುತ್ತಿದ್ದ ಲಾರಿ, ಗೋವಾದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಟೆಂಪೂ ಡಿಕ್ಕಿಯಾಗಿವೆ. ನಸುಕಿನ 3 ಗಂಟೆ ಹೊತ್ತಿನಲ್ಲಿ ಅಪಘಾತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.