ಬೆಂಗಳೂರು: ಲಂಡನ್ನಲ್ಲಿ ಟಿಪ್ಪು ಸುಲ್ತಾನ್ ಅವರದು ಎಂದು ಹೇಳಲಾದ ಖಡ್ಗ ಹರಾಜಾಗಿದೆ.
ಸುಮಾರು ೩, ೪ಕೋಟಿರೂ.ಗೆ ಟಿಪುö್ಪ ಸುಲ್ತಾನ್ ಖಡ್ಗ ಹರಾಜಾಗಿದೆ ಎಂದು ಹೇಳಲಾಗಿದೆ.
ಖಡ್ಗದ ಮುಂಭಾಗದಲ್ಲಿ ಹುಲಿ ಪಟ್ಟೆ ವಿನ್ಯಾಸವಿದೆ. ಇದು ಮೈಸೂರಿನ ಹುಲಿಯ ವಿಶಿಷ್ಟ ಎಂದು ಹರಾಜಿನ ಸಂದರ್ಭದಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಟಿಪುö್ಪ ಸುಲ್ತಾನನ ತಂದೆ ಹೈದರ್ ಅಲಿಗೆ ಗೌರವ ಸಲ್ಲಿಸಲು ಖಡ್ಗದ ಮೇಲೆ ಅರೇಬಿಕ್ ಅಕ್ಷರ ‘ಹ’ ಅನ್ನು ಚಿನ್ನದಲ್ಲಿ ಕೆತ್ತಲಾಗಿದೆ ೧೭೮೨-೧೭೯೯ರವರೆಗೆ ಮೈಸೂರನ್ನು ಆಳಿದ್ದ ಟಿಪುö್ಪ ಸುಲ್ತಾನ ಎಂದು ಈ ಬಗ್ಗೆ ಬೋನ್ಹ್ಯಾಮ್ ಹರಾಜು ಸಂಸ್ಥೆ ಪ್ರಕಟ ಮಾಡಿದೆ.
೧೭೯೯ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಟಿಪುö್ಪ ಬಳಸಿದ್ದ ಎನ್ನಲಾದ ಖಡ್ಗ ಆ ಯುದ್ಧದಲ್ಲಿ…
ಸೋತ ಬಳಿಕ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ ಡಿಕ್ ಎನ್ನುವವರಿಗೆ ಅಧಿಕಾರಿಗಳು ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದುಬಂದಿದೆ.
ಸದ್ಯ ಡಿಕ್ ವಂಶದವರು ಈ ಖಡ್ಗವನ್ನು ಹರಾಜಿಗಿಟ್ಟಿದ್ದರು. ಖಡ್ಗ ೩೦೦ ವರ್ಷಗಳಿಂದ ಡಿಕ್ ಕುಟುಂಬದೊAದಿಗೆ ಇತ್ತು ಎಂದು ಹೇಳಲಾಗಿದೆ.